More

    ಅಪಾರ ಭಕ್ತರ ನಡುವೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಮಾಲತಿ ಹೊಳ್ಳ ಚಾಲನೆ

    ಕೊಪ್ಪಳ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಪದ್ಮಶ್ರೀ ಪುರಸ್ಕೃತೆ, ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಮಾಲತಿ ಹೊಳ್ಳ ಚಾಲನೆ ನೀಡಿದರು.

    ಎರಡನೇ ಕುಂಭಮೇಳ ಎಂದೇ ಕರೆಸಿಕೊಳ್ಳುವ ಮಹಾರಥೋತ್ಸವಕ್ಕೆ ಜನ ಸಾಗರವೇ ಸೇರಿತ್ತು.

    ಮಹಾರಥೋತ್ಸದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಸಿ.ಟಿ. ರವಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,‌ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ್​, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಭಾಗಿ ಸೇರಿ ಜಿಲ್ಲೆ ಹಾಲಿ-ಮಾಜಿ ಶಾಸಕರು ಉಪಸ್ಥಿತರಿದ್ದರು.

    ಮಹಾರಥೋತ್ಸವದಲ್ಲಿ 5 ರಿಂದ‌ 6 ಲಕ್ಷ ಭಕ್ತಾದಿಗಳು ಭಾಗಿಯಾಗಿದ್ದಾರೆ. ಅಜ್ಜನ ಜಾತ್ರೆ ಪ್ರತಿ ವರ್ಷ ವಿಭಿನ್ನವಾಗಿ ನಡೆಯುತ್ತದೆ. ಈ ಬಾರಿ ಆಧುನಿಕತೆಯ ಸ್ಪರ್ಶ ನೀಡಲಾಘಿದೆ. ವಿಡಿಯೋ ಟ್ರೈಲರ್ ಸಾಂಗ್ ಮೂಲಕ ಆಹ್ವಾನ ನೀಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts