ಮೊರಾರ್ಜಿ ವಸತಿ ಶಾಲೆಯಲ್ಲಿ ಹೋಂ ವರ್ಕ್​ ಮಾಡದ ವಿದ್ಯಾರ್ಥಿನಿಗೆ ಕಿರುಕುಳ

ಕೊಪ್ಪಳ: ಹೋಂ ವರ್ಕ್​ ಮಾಡಿಲ್ಲವೆಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕರು 6ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿನಿ ಶಿಕ್ಷಕರ ವಿರುದ್ಧ ಆರೋಪ ಮಾಡಿದ್ದಾಳೆ.

ಹೋಮ್​ ವರ್ಕ್​ ಮಾಡಿಲ್ಲವೆಂದು ಶಿಕ್ಷಕರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮತ್ತು ದಿನಕ್ಕೆ ಮೂರ್ನಾಲ್ಕು ನೋಟ್​ಬುಕ್ ಬರೆಯಬೇಕೆಂದು ಹಿಂಸಿಸುತ್ತಾರೆ. ಇಲ್ಲದಿದ್ದರೆ ಇಲ್ಲಿಂದ ಟಿಸಿ ತೆಗೆದುಕೊಂಡು ಹೋಗುವಂತೆ ಶಿಕ್ಷಕರು ಬೆದರಿಸಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದು, ವಸತಿ ಶಾಲೆಯಿಂದ ಮನೆಗೆ ಬಂದಿದ್ದಾಳೆ.

ಮನೆಗೆ ಬಂದು ವಿಷಯವನ್ನು ಪಾಲಕರ ಬಳಿ ಹೇಳಿಕೊಂಡಿದ್ದು, ಪಾಲಕರು ಶಿಕ್ಷಕರ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಹೊಡೆಯುವುದು ಕಡಿಮೆ ಮಾಡಿದರೆ ಮಾತ್ರ ನಾನು ಶಾಲೆಗೆ ಹೋಗುವುದಾಗಿ ವಿದ್ಯಾರ್ಥಿನಿ ಹಠ ಹಿಡಿದಿದ್ದಾಳೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *