ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

ಕೊಪ್ಪಳ: ಆತ ಸರ್ಕಾರಿ ಉದ್ಯೋಗಿ. ಮದುವೆಯಾಗಿ ಮೂವರು ಮಕ್ಕಳು ಇದ್ದಾರೆ. ಆದರೂ ಪರಸ್ತ್ರೀ ಹಿಂದೆ ಬಿದ್ದು, ಗುಟ್ಟಾಗಿ ಆಕೆಗೆ ಮನೆ ಮಾಡಿಕೊಟ್ಟು ಅಲ್ಲೇ ಕಾಲ ಕಳೆಯುತ್ತಿದ್ದವ ಹೆಂಡ್ತಿ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ!

ಪರಸ್ತ್ರೀ ಜತೆ ಅಕ್ರಮವಾಗಿ ಸಂಬಂಧ ಇಟ್ಟುಕೊಂಡು ಹೆಂಡತಿ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ಸಣ್ಣ ನೀರಾವರಿ ಇಲಾಖೆ ಕೊಪ್ಪಳ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ ವಿನೋದ್​ ಕುಮಾರ ಗುಪ್ತಾ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿರಿ ನಿನ್ ಹೆಂಡ್ತಿಗೆ ಸೀರೆ ತರಲು ಹೋಗಿದ್ಯಾ? ರಾಸ್ಕಲ್​…: ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ

ಕೊಪ್ಪಳ ನಗರದಲ್ಲಿ ವಿನೋದ್​ ಕುಮಾರ ಗುಪ್ತಾ ಅವರ ಮನೆ ಇದೆ. ಬಿ.ಟಿ.ಪಾಟೀಲ್​ ನಗರದಲ್ಲಿ ಮತ್ತೊಂದು ಮನೆ ಮಾಡಿ ಶೀಲಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಅಲ್ಲದೆ ಪತ್ನಿ ಭಾಗ್ಯಲಕ್ಷ್ಮೀಗೆ ವರದಕ್ಷಿಣೆ ಕಿರುಕುಳ ನೀಡಿ, ದೈಹಿಕ ಹಲ್ಲೆ ನಡೆಸಿದ್ದ ಎನ್ನಲಾಗಿದೆ.

ತನ್ನ ಗಂಡನಿಗೆ ಬೇರೊಬ್ಬ ಮಹಿಳೆ ಜತೆ ಅಕ್ರಮ ಸಂಬಂಧ ಇದೆ ಎಂದು ಅನುಮಾನಗೊಂಡಿದ್ದ ಭಾಗ್ಯಲಕ್ಷ್ಮೀ, ಜ.6ರಂದು ಬಿ.ಟಿ.ಪಾಟೀಲ್​ ನಗರದಲ್ಲಿ ಶೀಲಾ ಎಂಬಾಕೆ ಇದ್ದ ಮನೆಗೆ ತನ್ನ ಮೂವರು ಮಕ್ಕಳೊಂದಿಗೆ ಎಂಟ್ರಿ ಕೊಡುತ್ತಿದ್ದಂತೆ ಗುಟ್ಟಾಗಿದ್ದ ರಂಪಾಟ ಬೀದಿಗೆ ಬಂದಿದೆ.
ಆ ವೇಳೆ ಶೀಲಾ ಜತೆ ವಿನೋದ್​ ಕುಮಾರ ಗುಪ್ತಾ ಕೂಡ ಅಲ್ಲೇ ಇದ್ದ. ಸಿಟ್ಟಿಗೆದ್ದ ಭಾಗ್ಯಲಕ್ಷ್ಮೀ, ಶೀಲಾ ಮೇಲೆ ಹಲ್ಲೆ ಮಾಡಿ ರಂಪಾಟ ನಡೆಸಿದರು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದರು. ಇದನ್ನೂ ಓದಿರಿ ರಾಧಿಕಾಗೆ ಮಾತ್ರವಲ್ಲ, ಬೇರೆ 8 ನಟಿಯರಿಗೂ ಲಕ್ಷಾಂತರ ಹಣ ಕೊಟ್ಟಿದ್ದ ಯುವರಾಜ್​!

ಶೀಲಾ ಜತೆ ನನ್ನ ಗಂಡ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಹಾಗಾಗಿ ನನ್ನ ಮೇಲೆ ಆತ ಹಲ್ಲೆ ನಡೆಸಿದ್ದ ಎಂದು ಕೊಪ್ಪಳ ಮಹಿಳಾ ಠಾಣೆಯಲ್ಲಿ ಭಾಗ್ಯಲಕ್ಷ್ಮೀ ದೂರು ನೀಡಿದ್ದಾರೆ.

ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

Share This Article

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…