ವೈರಲ್​ ಆಯ್ತು ಕೊಪ್ಪಳ ಪೇದೆಯ ಹಾಡು

ಕೊಪ್ಪಳ: ಇತ್ತೀಚೆಗಷ್ಟೇ ಕೊಪ್ಪಳದ ಗಂಗಮ್ಮ ತಮ್ಮ ಗಾಯನದ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿದ್ರು. ಇದರ ಬೆನ್ನಲ್ಲೇ ಪೊಲೀಸ್ ಪೇದೆಯೊಬ್ಬರು ಮೊಹ್ಮದ್ ರಫಿ ಅವರ ಹಾಡನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದಾರೆ.

ಹೌದು, ವೃತ್ತಿಯೊಂದಿಗೆ ಹಾಡುಗಾರಿಕೆಯನ್ನು ಪ್ರವೃತ್ತಿಯಾಗಿಸಿಕೊಂಡಿರುವ ಕೊಪ್ಪಳದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಮುಖ್ಯ ಪೇದೆ ಮೌಲಾಹುಸೇನ್ ವರ್ದಿ, ಆ.15ರಂದು ಫೇಸ್​ಬುಕ್​ ಲೈವ್​ನಲ್ಲಿ ಹಾಡು ಹಾಡಿದ್ದರು. ಈ ವಿಡಿಯೋವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಖುಷಿಯಿಂದ ಶೇರ್​ ಮಾಡುತ್ತಿದ್ದಾರೆ.

ತುಂಗಭದ್ರಾ ಜಲಾಶಯದ ಬಳಿ ನಡೆಯುತ್ತಾ 1964ರಲ್ಲಿ ತೆರೆ ಕಂಡ ಹಕ್ಕೀಕತ್ ಎಂಬ ಹಿಂದಿ ಚಲನಚಿತ್ರದ ಗೀತೆಯನ್ನು ಹಾಡಿರುವ ಮೌಲಾಹುಸೇನ್ ಅವರ ಹಾಡಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 10 ದಿನಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದ್ದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶೇರ್​ ಆಗುತ್ತಿದೆ. (ದಿಗ್ವಿಜಯ ನ್ಯೂಸ್​)

ವೈರಲ್​ ಆಯ್ತು ಕೊಪ್ಪಳ ಪೇದೆಯ ಹಾಡು

ವೈರಲ್​ ಆಯ್ತು ಕೊಪ್ಪಳ ಪೇದೆಯ ಹಾಡು#Koppala #Constable #song #vedio #Viral

Dighvijay News – ದಿಗ್ವಿಜಯ ನ್ಯೂಸ್ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಆಗಸ್ಟ್ 24, 2018