More

    ಸಮ್ಮೇಳನಗಳು ಭವಿಷ್ಯಕ್ಕೆ ದಿಕ್ಸೂಚಿಯಾಗಲಿ

    ದಿ.ವಿಠ್ಠಪ್ಪ ಗೋರಂಟ್ಲಿ ವೇದಿಕೆ, ಕೊಪ್ಪಳ: ಸಮ್ಮೇಳನಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಇತಿಹಾಸ, ವರ್ತಮಾನ ಹಾಗೂ ಭವಿಷ್ಯಕ್ಕೆ ಸಾಹಿತ್ಯ ದಿಕ್ಸೂಚಿಯಾಗಬೇಕು. ಈ ನಿಟ್ಟಿನಲ್ಲಿ ಸಮ್ಮೇಳನಗಳು ಆಯೋಜನೆಗೊಳ್ಳಬೇಕಿದೆ ಎಂದು ವಿಜಯಪುರ ಕೇಂದ್ರ ಕಾರಾಗೃಹ ಅಧೀಕ್ಷಕ ಡಾ.ಐ.ಜೆ.ಮ್ಯಾಗೇರಿ ಅಭಿಪ್ರಾಯಪಟ್ಟರು.

    ನಗರದ ಸಾಹಿತ್ಯ ಭವನದಲ್ಲಿ ಕಸಾಪ ತಾಲೂಕು ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸದ್ಯ ವಿವಿಧ ಕಾರಣಗಳಿಂದ ಭಿನ್ನತೆ ವ್ಯಕ್ತವಾಗುತ್ತಿದೆ. ಅದಕ್ಕೆಲ್ಲ ಸಾಹಿತ್ಯ ಉತ್ತರವಾಗಬೇಕಿದೆ. ಚುನಾವಣೆ ಕಾಲಘಟ್ಟದಲ್ಲಿ ನಾವಿದ್ದೇವೆ. ನಾಡಿನ ಭವಿಷ್ಯ ನಮ್ಮ ಮತದ ಮೇಲೆ ನಿರ್ಧಾರವಾಗುತ್ತದೆ. ರಾಜಕಾರಣಿಗಳು ಮತದಾರನನ್ನು ಕತ್ತೆಗಿಂತ ಕೀಳಾಗಿ ಕಾಣುತ್ತಿದ್ದಾರೆ. ಅದನ್ನು ನಾವೆಲ್ಲ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಿದೆ. ನಾನು ಮೂಲತಃ ಕೊಪ್ಪಳದವ. ಕಲ್ಯಾಣ ಕರ್ನಾಟಕ ಭಾಗದ ಎರಡನೇ ಶಕ್ತಿ ಕೇಂದ್ರ ಕೊಪ್ಪಳ. ಕೋಟೆ, ಗವಿಮಠ, ಮಳೇಮಲ್ಲೇಶ್ವರ, ಅಶೋಕನ ಶಾಸನ ಪವಿತ್ರ ತಾಣಗಳಿವೆ. ಜೈನ, ಬೌದ್ಧರ ಕಾಶಿ. ಇಲ್ಲಿನ ಸಾಂಸ್ಕೃತಿಕ ವೈಭವ ಬೇರೆಲ್ಲೂ ಇಲ್ಲ. ತಿರುಳ್ಗನ್ನಡನಾಡು. ಅತ್ಯಂತ ಸರಳ, ಸ್ವಚ್ಛ ಕನ್ನಡದ ನಾಡು. ಇತಿಹಾಸ, ಪುರಾಣದಿಂದಲೂ ಇದು ತಿಳಿದು ಬರುತ್ತದೆ. ಅದು ನಮ್ಮ ಹೆಮ್ಮೆ. ಇಂಥ ನಾಡಿನಲ್ಲಿ ಸಮ್ಮೇಳನ ಉದ್ಘಾಟಿಸಿದ್ದು ಸಂತಸ ನೀಡಿದೆ. ಸಮ್ಮೇಳನಗಳು ಭವಿಷ್ಯಕ್ಕೆ ನಾಂದಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

    ಶಾಸಕ ರಾಘವೇಂದ್ರ ಹಿಟ್ನಾಳ್ ದಿಕ್ಸೂಚಿ ಭಾಷಣ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಸ್ವಾಗತಿಸಿದರು. ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಈಶ್ವರ ಹತ್ತಿ ಅಭಿಪ್ರಾಯ ಹಂಚಿಕೊಂಡರು. ಸಮ್ಮೇಳನ ಅಂಗವಾಗಿ ಹೊರತರಲಿರುವ ಕೊಪಣ ಪರ್ವ ಸ್ಮರಣ ಸಂಚಿಕೆ ಮುಖಪುಟ ಹಾಗೂ ಸಮ್ಮೇಳನ ಅಧ್ಯಕ್ಷರ ನುಡಿಯನ್ನು ಸಹಕಾರಿ ಧುರೀಣ ಶೇಖರಗೌಡ ಮಾಲಿಪಾಟೀಲ್ ಬಿಡುಗಡೆಗೊಳಿಸಿದರು. ಗುತ್ತಿಗೆದಾರ ಬಸವರಾಜ ಪುರದ, ಸಂಘ-ಸಂಸ್ಥೆಗಳ ಪ್ರತಿನಿಧಿ ನಬೀಸಾಬ್ ಕುಷ್ಟಗಿ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ರಾಜಶೇಖರ್ ಅಂಗಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ್, ನಗರಸಭೆ ಪೌರಾಯುಕ್ತ ಎಚ್.ಎನ್.ಭಜಕ್ಕನವರ, ಸದಸ್ಯರಾದ ಮುತ್ತು ಕುಷ್ಟಗಿ, ಗುರುರಾಜ ಹಲಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts