ದೇವರ ನಿರ್ದೇಶನವಿಲ್ಲದೆ ಯಾವ ನಾಟಕವೂ ನಡೆಯಲ್ಲ

GAVI SHREE

ಕೊಪ್ಪಳ: ಜಗತ್ತು ಒಂದು ನಾಟಕ ಮಂದಿರ. ಜೀವಿಗಳು ಪಾತ್ರಧಾರಿಗಳು. ದೇವರು ನಿರ್ದೇಶಕ. ಆತನ ನಿರ್ದೇಶನವಿಲ್ಲದೆ ಜಗತ್ತಿನಲ್ಲಿ ಯಾವ ನಾಟಕವು ನಡೆಯುವುದಿಲ್ಲ ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಿ.ಮಹಾಂತಮ್ಮ ಸಂಗಣ್ಣ ಗಡಾದ ಶೆಟ್ರ ಮೆಮೋರಿಯಲ್ ಟ್ರಸ್ಟ್, ಗವಿಶ್ರೀ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸೇವಾ ಸಂಸ್ಥೆ ಸಹಯೋಗದಲ್ಲಿ ದಿ. ನೀಲನಗೌಡ ಹಿರೇಗೌಡರ್ ಭಾನಾಪೂರ ಇವರ ಸ್ಮರಣಾರ್ಥ ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ದಿ.ಪಿ.ಬಿ. ಧುತ್ತರಗಿ ವಿರಚಿತ ಸಂಪತ್ತಿಗೆ ಸವಾಲ್ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಭೂಮಿ ಮೇಲೆ ಎಲ್ಲರದ್ದೂ ಪಾತ್ರಗಳಿವೆ ಆದರೆ, ಅವರವರ ಪಾತ್ರ ಸೂಕ್ತವಾಗಿ ನಿರ್ವಹಿಸಿದರೆ ಅರ್ಥಪೂರ್ಣ ಎಂದರು.

ಮನುಷ್ಯ ಬಂಗಾರ ತಯಾರಿಸುವ ಫ್ಯಾಕ್ಟರಿ ನಿರ್ಮಿಸುತ್ತಾನೆ. ನಿಸರ್ಗ ನಿರ್ಮಿಸಲು ಆಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಆದಾಯದ ಬರದಲ್ಲಿ ಆರೋಗ್ಯ ಹಾಗೂ ಸಂಪತ್ತು ಗಳಿಸುವ ಬರದಲ್ಲಿ ಸಂತೋಷ ಕಳೆದುಕೊಂಡಿದ್ದಾನೆ ಎಂದು ಹೇಳಿದರು.

ದೇವರ ನಿರ್ದೇಶನವಿಲ್ಲದೆ ಯಾವ ನಾಟಕವೂ ನಡೆಯಲ್ಲ

ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಸಿದ್ದನಗೌಡ ಹಿರೇಗೌಡರ, ಚನ್ನಬಸಮ್ಮ ಹಿರೇಗೌಡರ, ಬಸವರಾಜ ಬಿನ್ನಾಳ, ಅಂತಾರಾಷ್ಟ್ರೀಯ ಜನಪದ ಕಲಾವಿದ ಡಾ. ಜೀವನ್‌ಸಾಬ್ ಬಿನ್ನಾಳ, ಗಾಯಕ ಬಾಷಾಸಾಬ್ ಹಿರೇಮನಿ ಅವರನ್ನು ಸನ್ಮಾನಿಸಲಾಯಿತು.

ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಬಿ. ಕಡಿ, ಎಸಿ ಕ್ಯಾಪ್ಟನ್ ಮಹೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಸಾಬ್, ಜೆಡಿಎಸ್ ಕೋರ್ ಕಮೀಟಿ ಸಮಿತಿ ಸದಸ್ಯ ಸಿ.ವಿ ಚಂದ್ರಶೇಖರ್, ಕ.ರಾ.ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ ಕಣವಿ, ಹಿರಿಯ ವಕೀಲ ಆರ್.ಬಿ. ಪಾನಘಂಟಿ, ವಿ.ನೌ.ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಮತ್ತಿತರರಿದ್ದರು.

Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…