ಸಿಎಂ ಸರ್​ ಗುಳೆ ಹೋಗುವುದನ್ನು ತಡೆಯಿರಿ ಎಂದು ಯುವಕನಿಂದ ಟ್ವೀಟ್​

ಕೊಪ್ಪಳ: ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಮಧ್ಯೆ ಇಲ್ಲೊಬ್ಬ ಕೊಪ್ಪಳದ ಯುವಕ ಸಾಮಾಜಿಕ ಜಾಲತಾಣವನ್ನು ಸಾಮಾಜಿಕಮುಖಿ ಕಾರ್ಯಕ್ಕೆ ಬಳಸಿಕೊಂಡು ಇತರರಿಗೆ ಮಾದರಿಯಾಗಿದ್ದಾನೆ.

ಕೆಲಸವಿಲ್ಲದೆ ಜೀವನ ನಡೆಸಲು ದುಸ್ಥರವಾಗಿರುವ ಸಮಯದಲ್ಲಿ ಗ್ರಾಮೀಣ ಭಾಗದ ಜನರು ಹೊಟ್ಟೆಪಾಡಿಗಾಗಿ ಹುಟ್ಟಿದ ಊರನ್ನೇ ಬಿಟ್ಟು ಗುಳೆ ಹೋಗುತ್ತಿರುವುದನ್ನು ಯುವಕ ಗಣೇಶ್​ ಚೌಹಾನ್​ ಬಂಜಾರ ಟ್ವೀಟ್​ ಮಾಡುವ ಮೂಲಕ ಸಿಎಂ ಗಮನಕ್ಕೆ ತಂದಿದ್ದಾನೆ.

ವಿರುಪಾಪುರ ತಾಂಡಾದ ಜನರು ಸಣ್ಣ ಪುಟ್ಟ ಮಕ್ಕಳನ್ನು ಹೊತ್ತುಕೊಂಡು ಕಬ್ಬು ಕಡಿಯಲು ಹೋಗುತ್ತಿದ್ದಾರೆ. ಅವರ ಜತೆ ವಯಸ್ಸಾದ ಅಜ್ಜ, ಅಜ್ಜಿಯಂದಿರೂ ಸಹ ಹೋಗುತ್ತಿದ್ದು, ಮೈಸೂರು, ಮಂಡ್ಯ ಹಾಗೂ ತಮಿಳುನಾಡಿಗೆ ಗುಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಸಿಎಂ ಆಫ್ ಕರ್ನಾಟಕ ಟ್ವಿಟರ್ ಖಾತೆಗೆ ಗಣೇಶ್​ ಟ್ವಿಟ್ ಮಾಡಿದ್ದಾನೆ. (ದಿಗ್ವಿಜಯ ನ್ಯೂಸ್​​)

Leave a Reply

Your email address will not be published. Required fields are marked *