25.7 C
Bangalore
Monday, December 16, 2019

ಬಾರದ ಹಣ, ಕೃಷಿಕರು ಹೈರಾಣ

Latest News

ಸರ್ಕಾರದ ಸಾಧನೆಗಳ ಅನಾವರಣ

ವಿಜಯಪುರ: ನೆರೆ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಂಡ ಛಾಯಾಚಿತ್ರ ಪ್ರದರ್ಶನಕ್ಕೆ...

ಅವಶ್ಯಕ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ

ವಿಜಯಪುರ: ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯ ಭೂ ಒಡೆತನ ಯೋಜನೆಯಡಿ ಅವಶ್ಯಕವಿರುವ ಅನುದಾನ-ಜಮೀನು ಕುರಿತು ವಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲು ಕ್ರಮ...

ಕ್ರೀಡೆ, ಯೋಗಕ್ಕೆ ಆದ್ಯತೆ ನೀಡಿ

ಹುನಗುಂದ: ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸ ನೀಡುವ ಕ್ರೀಡೆ ಹಾಗೂ ಯೋಗ ಮಾಡಲು ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ವಿಜಯ ಮಹಾಂತೇಶ...

ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ತಮ್ಮ ಪ್ರಜೆಗಳನ್ನು ವಾಪಸ್​ ಕರೆಯಿಸಿಕೊಳ್ಳಲು ಸಿದ್ಧ ಎಂದ ಬಾಂಗ್ಲಾದೇಶ

ಢಾಕಾ: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ವಾಪಸ್ ಪಡೆಯಲು ಸಿದ್ದವಿರುವುದಾಗಿ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೆಮೊನ್ ಹೇಳಿದ್ದಾರೆ. ಪೌರತ್ವ ಕಾಯ್ದೆ...

ಪೌರತ್ವ ತಿದ್ದುಪಡಿ ಮಸೂದೆ ತಿರಸ್ಕರಿಸಲು ಒತ್ತಾಯ

ವಿಜಯಪುರ: ಪೌರತ್ವ ತಿದ್ದುಪಡಿ ಮಸೂದೆ-2019 ತಿರಸ್ಕರಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ೆಡರೇಷನ್ (ಎಸ್‌ಎ್ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎ್ಐ) ಕಾರ್ಯಕರ್ತರು...
<6 ತಿಂಗಳಾದರೂ ಬಾರದ ಕಡಲೆ ರೊಕ್ಕ > ತಪ್ಪು ದಾಖಲೆಯಿಂದ ತಪ್ಪಿದ ಅನುದಾನ>

ವಿ.ಕೆ. ರವೀಂದ್ರ

ಕೊಪ್ಪಳ:  ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ರೈತರಿಂದ ಖರೀದಿಸಿದ ಕಡಲೆ ಹಾಗೂ ತೊಗರಿ ಹಣ 6 ತಿಂಗಳಾದರೂ ರೈತರ ಕೈಸೇರಿಲ್ಲ. ಕೆಲ ರೈತರು ತಪ್ಪು ದಾಖಲೆ ನೀಡಿದ ಕಾರಣ ಜಿಲ್ಲೆಗೆ ಬರಬೇಕಿದ್ದ ಅನುದಾನವೂ ಕೈತಪ್ಪುವಂತಾಗಿದೆ.

ಕಳೆದ ವರ್ಷ ಹಿಂಗಾರು ಮಳೆ ಉತ್ತಮವಾದ ಪರಿಣಾಮ ರೈತರು ಹೆಚ್ಚು ಬೆಳೆ ಬೆಳೆದಿದ್ದರು. ಮಾರುಕಟ್ಟೆಯಲ್ಲಿ ತೊಗರಿ ಹಾಗೂ ಕಡಲೆ ಬೆಲೆ ಕುಸಿದ ಪರಿಣಾಮ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿ ಮಾಡಲಾಗಿದೆ. ಆದರೆ, ಖರೀದಿ ಮಾಡಿ 6 ತಿಂಗಳು ಕಳೆದರೂ ಹಣ ಅನ್ನದಾತರ ಕೈಸೇರಿಲ್ಲ. ಚುನಾವಣೆ ನೀತಿ ಸಂಹಿತೆ, ಅನುದಾನ ಕೊರತೆ ಹೆಸರಿನಲ್ಲಿ ಅಧಿಕಾರಿಗಳು ದಿನ ದೂಡುತ್ತಿದ್ದು, ರೈತರ ಸಹನೆ ಕಟ್ಟೆಯೊಡೆಸಿದೆ. ಪ್ರಸಕ್ತ ವರ್ಷ ಮುಂಗಾರು ಉತ್ತಮವಾಗಿದ್ದರೂ ನಂತರದಲ್ಲಿ ಮಳೆ ಬಾರದೆ ಬೆಳೆಗಳೆಲ್ಲ ಒಣಗುತ್ತಿವೆ. ಈ ಸಮಯದಲ್ಲಿ ಬೆಳೆ ಹಣವಾದರೂ ಬಂದರೆ ನಿತ್ಯ ಖರ್ಚಿಗೆ ಅನುಕೂಲವಾಗಲಿದೆ ಎಂದು ರೈತರು ಕಾಯುತ್ತಿದ್ದಾರೆ. ಅಲ್ಲದೆ, ಹಣ ನೀಡುವಂತೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿದ್ದಾರೆ.

ಜಿಲ್ಲೆಯ 21 ಸೊಸೈಟಿಗಳಲ್ಲಿ 4,566 ರೈತರಿಂದ 54,504 ಕ್ವಿಂಟಾಲ್ ಕಡಲೆ ಖರೀದಿಸಲಾಗಿದೆ. ಅದರ ಮೊತ್ತ 23.98 ಕೋಟಿ ರೂ. ಸದ್ಯ 12.41 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 2385 ರೈತರ ಖಾತೆಗೆ ಹಣ ವರ್ಗಾವಣೆಯಾಗಿದೆ. ಇನ್ನೂ 26,279 ಕ್ವಿಂಟಾಲ್ ಕಡಲೆಯ 11.56 ಕೋಟಿ ರೂ. ಹಣ ಬಾಕಿಯಿದ್ದು, 2181 ರೈತರು ಹಣದ ನಿರೀಕ್ಷೆಯಲ್ಲಿದ್ದಾರೆ. ಕೊಪ್ಪಳ, ಕುಷ್ಟಗಿ, ಕುಕನೂರು ಹಾಗೂ ತಾವರಗೇರಾದಲ್ಲಿ 2917 ರೈತರಿಂದ 34,500 ಕ್ವಿಂಟಾಲ್ ತೊಗರಿಯನ್ನು ಬೆಂಬಲ ಬೆಲೆಯಡಿ ಖರೀದಿಸಲಾಗಿದೆ. ಇದರ ಮೊತ್ತ 20.70 ಕೋಟಿ ರೂ. ಆಗಲಿದೆ. ಇದರಲ್ಲಿ 1001 ಕ್ವಿಂಟಾಲ್ ತೊಗರಿಯ 60 ಲಕ್ಷ ರೂ. ಬಾಕಿಯಿದೆ. ಆದರೆ, ಕುಷ್ಟಗಿ ಭಾಗದಲ್ಲಿ ತೊಗರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದರಿಂದ ಮತ್ತೆ 2 ಕೇಂದ್ರ ಆರಂಭಿಸಿ 1463 ರೈತರಿಂದ 11,385 ಕ್ವಿಂಟಾಲ್ ತೊಗರಿ ಖರೀದಿಸಲಾಗಿದೆ. ಇದರ ಮೊತ್ತ 6.83 ಕೋಟಿ ರೂ. ಇದರಲ್ಲಿ ಇನ್ನೂ 1 ಕೋಟಿ ರೂ. ಹಣ ಬರಬೇಕಿದೆ.

ಏಕೆ ವಿಳಂಬ?:  ಸರ್ಕಾರದಿಂದ ಅನುದಾನ ಬಿಡುಗಡೆ ಆಗದಿರುವದು ಒಂದು ಕಾರಣವಾದರೆ, ತಪ್ಪು ದಾಖಲೆ ಸಲ್ಲಿಸಿದ್ದರಿಂದ ಮತ್ತಷ್ಟು ವಿಳಂಬವಾಗಿದೆ. ಖರೀದಿ ಪ್ರಕ್ರಿಯೆ ಸುಲಭಗೊಳಿಸಲು ಪ್ರತ್ಯೇಕ ಆಪ್ ಮೂಲಕ ತೊಗರಿ ಖರೀದಿಸಲಾಗಿದೆ. ಆದರೆ, ಸೋಸೈಟಿಯವರು ರೈತರು ಒದಗಿಸಿದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಲ್ಲ. ಇದರಿಂದ ಪಹಣಿ, ಬ್ಯಾಂಕ್ ಖಾತೆ ಹೊಂದಿದವರ ಹೊಂದಾಣಿಕೆಯಾಗಿಲ್ಲ. ಜತೆಗೆ ಸರ್ಕಾರಿ ಯೋಜನೆಗೆ ಮಾಡಿಸಿದ ಖಾತೆ ಸಂಖ್ಯೆಯನ್ನು ಕೆಲವರು ನೀಡಿದ್ದು, 50 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತ ಇಂಥ ಖಾತೆಗಳಿಗೆ ಜಮೆಯಾಗುತ್ತಿಲ್ಲ. ಹೀಗಾಗಿ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅರ್ಜಿ ತಿರಸ್ಕರಿಸಿದ್ದು, ಸಮರ್ಪಕ ದಾಖಲೆ ಸಲ್ಲಿಸಲು ಸೂಚಿಸಿರುವುದು ವಿಳಂಬಕ್ಕೆ ಕಾರಣ.

ತಪ್ಪಿದ ಅನುದಾನ :  ಬಹುಪಾಲು ಜಿಲ್ಲೆಗಳಲ್ಲಿ ತೊಗರಿ ಮಾರಿದ ರೈತರಿಗೆ ಸಂರ್ಪೂಣ ಹಣ ಪಾವತಿಯಾಗಿದೆ. ಆದರೆ, ತಪ್ಪು ದಾಖಲೆಯಿಂದಾಗಿ ಕೊಪ್ಪಳ ಜಿಲ್ಲೆಗೆ ಮೀಸಲಿದ್ದ ಹಣವನ್ನು ಬೇರೆ ಜಿಲ್ಲೆಗೆ ಹಂಚಿಕೆ ಮಾಡಿದ್ದು, ಜಿಲ್ಲೆಯ ರೈತರಿಗೆ ಅನುದಾನ ಕೊರತೆಯಾಗಿದೆ. ಜಿಲ್ಲೆಯಲ್ಲಿ 258 ರೈತರು ತಪ್ಪು ಮಾಹಿತಿ ನೀಡಿದ್ದರಿಂದ ಕೊಪ್ಪಳದ 4 ಕುಕನೂರಿನ ಇಬ್ಬರು ರೈತರ ಹಣ ಬೇರೆ ಖಾತೆಗಳಿಗೆ ಜಮೆಯಾಗಿದೆ. 62 ರೈತರ ಸರಿಯಾದ ದಾಖಲೆ ಮರು ಸಲ್ಲಿಕೆಯಾಗಿದ್ದು, ಇನ್ನೂ 196 ರೈತರ ಸಮರ್ಪಕ ದಾಖಲೆಗಳನ್ನು ಸೋಸೈಟಿಗಳು ಸಲ್ಲಿಸಿಲ್ಲ. ಹೀಗಾಗಿ ಜಿಲ್ಲೆಗೆ ಸರಿಯಾದ ಸಮಯಕ್ಕೆ ಬರಬೇಕಿದ್ದ ಅನುದಾನ ಕೈ ತಪ್ಪಿದ್ದು, ಸರ್ಕಾರದಿಂದ ಬಿಡುಗಡೆಯಾಗುವರೆಗೂ ಕಾಯಬೇಕಿದೆ.

ಸರ್ಕಾರದಿಂದ ಹಂತ ಹಂತವಾಗಿ ಹಣ ಬಿಡುಗಡೆಯಾಗುತ್ತಿದೆ. ಬಂದ ಹಣವನ್ನು ರೈತರ ಖಾತೆಗೆ ವರ್ಗಾಯಿಸುತ್ತಿದ್ದೇವೆ. ತೊಗರಿ ರೈತರಿಗೆ ಬಹುಪಾಲು ಹಣ ಪಾವತಿಯಾಗಿದೆ. ಕಡಲೆ ಮಾರಿದ ಅರ್ಧದಷ್ಟು ರೈತರಿಗೆ ಹಣ ಬರಬೇಕಿದೆ. ಅನುದಾನ ಬಿಡುಗಡೆಯಾದ ತಕ್ಷಣ ರೈತರ ಖಾತೆಗೆ ಜಮೆ ಮಾಡಲಾಗುವುದು.
ಶ್ರೀಕಾಂತ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಜಿಲ್ಲಾ ವ್ಯವಸ್ಥಾಪಕ, ಕೊಪ್ಪಳ.

- Advertisement -

Stay connected

278,757FansLike
589FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...