ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನವೂ ಅವಶ್ಯ

ಕೊಪ್ಪಳ: ವಿದ್ಯಾರ್ಥಿಗಳಿಗೆ ಪಠ್ಯದ ಜ್ಞಾನದ ಜತೆಗೆ ಸಾಮಾನ್ಯ ಜ್ಞಾನವೂ ಅವಶ್ಯ ಎಂದು ಪತ್ರಕರ್ತ ಜಗದೀಶ್ ಅಂಗಡಿ ಹೇಳಿದರು.

ನಗರದ ಕೋಟೆ ಮಹೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ನಗರದ ಬಣಜಿಗ ಸಮುದಾಯದ ವಿದ್ಯಾರ್ಥಿಗಳಿಗೆ ಬಣಜಿಗ ಸಮಾನ ಮನಸ್ಕರ ವೇದಿಕೆ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣನವರ ಕಾಯಕ ಧರ್ಮದ ಮಾದರಿಯನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಕಾಯಕದಲ್ಲಿ ದೇವರನ್ನು ಕಂಡರೆ ಪ್ರತಿ ಕೆಲಸವೂ ಯಶಸ್ಸು ಕಾಣುತ್ತದೆ. ಜೀವನ ನಡೆಸಲು ಪ್ರಪಂಚದ ಜ್ಞಾನ ಅವಶ್ಯ. ಅದರ ಜತೆಗೆ ತಿಳಿವಳಿಕೆಯೂ ಅಗತ್ಯ. ವಿದ್ಯಾರ್ಥಿಗಳು ಕೇವಲ ಉದ್ಯೋಗ ಪಡೆಯುವುದಕ್ಕಷ್ಟೇ ಆದ್ಯತೆ ನೀಡದೆ, ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳೇ ಕಾರ್ಯಕ್ರಮ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಮುಖಂಡರಾದ ರಾಜು ಶೆಟ್ಟರ, ರಾಜೇಶ ವಾಲಿ, ರಾಜಶೇಖರ ಅಂಗಡಿ, ಜಗದೀಶ ಗುತ್ತಿ, ಮಂಜುನಾಥ ಅಂಗಡಿ, ರಾಜೇಶ ಬೆಳವಣಿಕಿ, ಬಸವರಾಜ ಏಳರೊಟ್ಟಿ, ಚನ್ನಬಸವರಾಜ ಸುಂಕದ, ಸಿದ್ದಣ್ಣ ವಾರದ, ಬಸಪ್ಪ ದೇಸಾಯಿ, ಚಂದ್ರಶೇಖರ ಖೇಣದ, ಶಿವಕುಮಾರ ಪಾವಲಿ ಶೆಟ್ಟರ ಇದ್ದರು.

Leave a Reply

Your email address will not be published. Required fields are marked *