ಕೊಪ್ಪಳ: ವಾರಸುದಾರರಿಲ್ಲದೆ ಬೀದಿಯಲ್ಲಿ ಅಸ್ವಸ್ಥಳಾಗಿದ್ದ ವೃದ್ಧೆಯೊಬ್ಬಳನ್ನು ರಸಿದ ಸಖಿ ತಂಡ ಚಿಕಿತ್ಸೆ ಕೊಡಿಸಿ, ಕುಟುಂಬದವರ ಪತ್ತೆ ಮಾಡಿ ಪುನರ್ ಮಿಲನ ಮಾಡಿಸಿದೆ.
ಕಳೆದ ಆಗಸ್ಟ್ನಲ್ಲಿ ದೈಹಿಕವಾಗಿ ಅಸ್ವಸ್ಥಳಾಗಿದ್ದ ವೃದ್ಧೆಯನ್ನು 108 ಆ್ಯಂಬುಲೆನ್ಸ್ ಮೂಲಕ ರಸಿದ ತಂಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ. ಆಪ್ತ ಸಮಾಲೋಚನೆ ಬಳಿಕ ವಿವರ ಪಡೆದಿದೆ. ಬಾಗಲಕೋಟೆ ಜಿಲ್ಲೆಯವಳಾಗಿದ್ದು, ಹೆಸರು ನೂರಜಾನ್, ಮಗ ಬಾಬಾ ರಾಜ್ ಎಂದು ತಿಳಿಸಿದ್ದಾಳೆ. ಚಿಕಿತ್ಸೆ ಬಳಿಕ ಹುಬ್ಬಳ್ಳಿ ಮದರ್ ತೆರೇಸಾ ಮಿಷಿನರಿ ಆ್ ಚಾರಿಟಿ ಟ್ರಸ್ಟ್ನಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಕುಟುಂಬದವರು ಮಹಿಳೆ ವಿವರ ಪಡೆದು ಕೇಂದ್ರಕ್ಕೆ ಬಂದು ವಾಪಸ್ ಕರೆದುಕೊಂಡು ಹೋಗಿದ್ದಾರೆಂದು ಸಖಿ ಕೇಂದ್ರದ ಆಡಳಿತಾಧಿಕಾರಿ ಯಮುನಾ ಬೆಸ್ತರ ತಿಳಿಸಿದ್ದಾರೆ.