ಸಾಕ್ಷಾೃಧಾರವಿಲ್ಲದೆ ಆರೋಪಿಸುವುದು ಸಲ್ಲ : ಸಚಿವ ಪುಟ್ಟರಂಗಶೆಟ್ಟಿ ಹೇಳಿಕೆ

ಕೊಪ್ಪಳ : ಮೈತ್ರಿ ಸರ್ಕಾರ 20 ಪರ್ಸೆಂಟ್ ಸರ್ಕಾರ ಎಂದು ಹೇಳುವ ಪ್ರಧಾನಿ ಮೋದಿ ಸಾಕ್ಷಾೃಧಾರ ನೀಡಲಿ. ಅದು ಬಿಟ್ಟು ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.

ಬಿಜೆಪಿ ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಸದ್ಯದ ಚುನಾವಣೆಯಲ್ಲಿ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೋ ಗೊತ್ತಿಲ್ಲ. ಯಾವುದೇ ಅಭಿವೃದ್ಧಿ ಮಾಡದೇ ಕೇವಲ ಸುಳ್ಳು ಹೇಳುತ್ತಾ ಜನರನ್ನು ಮೋಸಮಾಡಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸಿಎಂ ಕುಮಾರಸ್ವಾಮಿ ಸಾರ್ವಜನಿಕವಾಗಿ ಕಣ್ಣೀರು ಹಾಕುವ ವಿಷಯಕ್ಕೆ ಪ್ರತಿಕ್ರಿಯಿಸಿ, ಕಣ್ಣೀರು ಬರಲು ಹಲವು ಕಾರಣಗಳಿವೆ. ಅವರು ಯಾವ ವಿಷಯಕ್ಕೆ ಕಣ್ಣೀರಿಟ್ಟಿದ್ದಾರೆಂದು ಅವರನ್ನೇ ಕೇಳಬೇಕು ಎಂದರು. ಮುಖಂಡರಾದ ವೆಂಕೋಬ್, ನಾಗರಾಜ, ವೆಂಕಟೇಶ ಸಿಂಧನೂರು, ಕಾಟನ್ ಪಾಷಾ, ಯಂಕಪ್ಪ ಹೊಸಳ್ಳಿ ಮತ್ತಿತರರಿದ್ದರು.