ಕೊಪ್ಪಳ: ಶುಲ್ಕ ಭರಿಸದ್ದಕ್ಕೆ ಶಾಲಾ ಅವಧಿ ಮುಗಿದರೂ ಮಕ್ಕಳನ್ನು ಮನೆಗೆ ಕಳಿಸದೇ ಕಚೇರಿಯಲ್ಲಿಟ್ಟುಕೊಂಡ ಆರೋಪ ನಗರದ ನಿವೇದಿತ ಆಂಗ್ಲ ಮಾಧ್ಯಮ ಶಾಲೆ ವಿರುದ್ಧ ಕೇಳಿಬಂದಿದೆ.
ಅರ್ಧ ವಾರ್ಷಿಕ ಪರೀೆಗಳು ಸಮೀಪಿಸಿದ್ದು, ಕೆಲ ಪಾಲಕರು ಮಕ್ಕಳ ಶುಲ್ಕ ಭರಿಸಿಲ್ಲ. ಕರೆ ಮಾಡಿ ವಿಷಯ ತಿಳಿಸಿದರೂ ಕೆಲವರು ಕಟ್ಟಿಲ್ಲ. ಹೀಗಾಗಿ ಮಕ್ಕಳನ್ನು ಮನೆಗೆ ಕರೆದೊಯ್ಯಲು ಬಂದಾಗ ಶುಲ್ಕ ಕಟ್ಟುವಂತೆ ಹೇಳಬೇಕೆಂದು ಶಾಲೆ ಆಡಳಿತ ಮಂಡಳಿ ಯೋಚಿಸಿದೆ. ಗುರುವಾರ ಸಂಜೆ 4.30ಕ್ಕೆ ಶಾಲೆ ಬಿಟ್ಟಿದೆ. ಆದರೂ 15&20 ಮಕ್ಕಳನ್ನು ಮನೆಗೆ ಕಳಿಸದೇ ಒಂದು ತಾಸಿಗೂ ಹೆಚ್ಚು ಕಾಲ ಕಚೇರಿಯಲ್ಲಿ ಕೂಡಿಸಿಕೊಂಡಿದ್ದಾರೆ. ಇದನ್ನು ಕೆಲ ಪಾಲಕರು ಪ್ರಶ್ನಿಸಿದ್ದು, ಮಕ್ಕಳನ್ನು ಕೂಡಿ ಹಾಕುವುದು ಸರಿಯಲ್ಲವೆಂದು ವಾಗ್ವಾದ ಮಾಡಿದ್ದಾರೆ. ಶುಲ್ಕ ಭರಿಸದಿದ್ದರೆ ಪಾಲಕರಿಗೆ ಕೇಳಿ. ಅದನ್ನು ಬಿಟ್ಟು ಮಕ್ಕಳನ್ನು ಮನೆಗೆ ಕಳಿಸಿದೇ ಕೂಡಿಹಾಕಿಕೊಳ್ಳುವುದು ಸರಿಯಲ್ಲವೆಂದು ಪ್ರಶ್ನಿಸಿದ್ದಾರೆ. ಬಳಿಕ ಮಕ್ಕಳನ್ನು ಮನೆಗೆ ಕಳಿಸಲಾಗಿದೆ. ಶುಲ್ಕ ಭರಿಸಿಲ್ಲವೆಂದು ಮಕ್ಕಳನ್ನು ಮನೆಗೆ ಕಳಿಸದಿದ್ದರೆ ಹೇಗೆಂದು ಕೆಲ ಪಾಲಕರು ಆತಂಕ ವ್ಯಕ್ತಪಡಿಸಿದರು.
ಶಾಲೆ ಆರಂಭವಾಗಿ 4 ತಿಂಗಳು ಕಳೆದಿವೆ. ಹಲವು ವರ್ಷಗಳಿಂದ ಶಾಲೆ ನಡೆಸುತ್ತಿದ್ದೇವೆ. ನಮ್ಮ ಹಾಗೂ ಪಾಲಕರ ನಡುವೆ ಉತ್ತಮ ಬಾಂಧವ್ಯ ಇದೆ. ಕೆಲವರಿಗೆ ಹಲವು ಅವಕಾಶ ನೀಡಿದರೂ ಶುಲ್ಕ ಭರಿಸಿಲ್ಲ. ಕರೆ ಮಾಡಿದರೂ ೋನ್ ಸ್ವಿಚ್ ಆ್ ಇರುತ್ತದೆ. ಮಕ್ಕಳನ್ನು ಕರೆದೊಯ್ಯಲು ಶಾಲೆಗೆ ಬಂದಾಗ ವಿಚಾರಿಸೋಣ ಎಂದು ಮಕ್ಕಳನ್ನು ನಮ್ಮ ಕಚೇರಿಯಲ್ಲಿ ಕೂಡಿಸಿಕೊಂಡಿದ್ದೇವೆ. ಕೂಡಿ ಹಾಕಿಲ್ಲ. ವಿದ್ಯಾಭ್ಯಾಸದಲ್ಲೂ ಹಿಂದುಳಿದ ಮಕ್ಕಳ ಬಗ್ಗೆ ಪಾಲಕರೊಂದಿಗೆ ಚರ್ಚಿಸಲು ಕೆಲ ಮಕ್ಕಳನ್ನು ಕೂಡಿಸಿಕೊಳ್ಳುತ್ತೇವೆ.
ನಿತೀಶ್ ಪುಸ್ಕರ್. ನಿವೇದಿತಾ ಶಾಲೆ ಮುಖ್ಯಸ್ಥ.