ಅಚ್ಚುಕಟ್ಟು ಪ್ರದೇಶದ ಮೊದಲ ಬೆಳೆಗೆ ನೀರು : ಸಚಿವ ತಂಗಡಗಿ‌ ಭರವಸೆ

ಕೊಪ್ಪಳ: ಮುನಿರಾಬಾದ್ ತುಂಗಭದ್ರಾ ಜಲಾಶಯದ ಗೇಟ್ ಕತ್ತಿರಕಸಿದ್ದು, ಸುಮಾರು 60 ಟಿಎಂಸಿ ಅಡಿ‌ನೀರು ಹೊರ ಬಿಡಬೇಕಾದ ಸ್ಥಿತಿ ಇದೆ. ಆದರೂ ಒಂದು ಬೆಳೆಗೆ ನೀರು ಕೊಡಲಾಗುವುದೆಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ‌ ಶಿವರಾಜ ತಂಗಡಗಿ ಭರವಸೆ ನೀಡಿದರು.

ಜಲಾಶಯಕ್ಕೆ ಭೇಟಿ‌ ನೀಡಿ ಮಾತನಾಡಿದರು.

ಜಲಾಶಯದಲ್ಲಿ ಸಂಗ್ರಹವಿರುವ ಒಟ್ಟು 105 ಟಿಎಂಸಿ ಅಡಿ ನೀರಿನ ಪೈಕಿ ಕನಿಷ್ಠ 61 ಟಿಎಂಸಿ ಅಡಿ ನೀರು ಹೊರಗಡೆ ಬಿಟ್ಟ ಬಳಿಕವೇ ಕೊಚ್ಚಿ ಹೋಗಿರುವ ಕ್ರಸ್ಟ್ ಗೇಟ್ ‌ಜಾಗಕ್ಕೆ ಹೊಸ ಗೇಟ್ ಅಳವಡಿಸಲು ಸಾಧ್ಯ. ಉಳಿಯುವ ನೀರಿನಲ್ಲಿ ಒಂದು ಬೆಳೆಗೆ ಫಸಲು ಬರುವ ವಿಶ್ವಾಸವಿದೆ.

ದೇವರ ದಯೆಯಿಂದ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿತ್ತು. ದುರದೃಷ್ಟವಶಾತ್ ಗೇಟ್ ‌ಕೊಚ್ಚಿ ಹೋಗಿ ‌ಇರುವ ನೀರನ್ನು ಅನಿವಾರ್ಯವಾಗಿ ನದಿಗೆ ಹರಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಳೆಗಾಲ‌ ಇನ್ನು ಇದೆ. ಮಲೆನಾಡು ಭಾಗದಲ್ಲಿ ಮತ್ತಷ್ಟು ಮಳೆಯಾಗುವ ವಿಶ್ವಾಸವಿದೆ. ಮೂರ್ನಾಲ್ಕು ದಿನಗಳಲ್ಲಿ ಹೊಸ ಗೇಟ್ ಅಳವಡಿಸಲಾಗುವುದು. ಬಳಿಕ ಬರುವ ನೀರು ‌ಸಂಗ್ರಹಿಸಲಾಗುವುದು. ರೈತರ ಹಿತರಕ್ಷಣೆಗೆ ಆದ್ಯತೆ ನೀಡಲಾಗುವುದು. ಒಂದು ಬೆಳೆಗೆ ಹಾಗೂ ಕುಡಿವ ನೀರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.

ಮೊದಲು ಗೇಟ್ ಅಳವಡಿಸುವುದು ಇದ್ದ ನೀರು ಉಳಿಸಿಕೊಳ್ಳಲು ಆದ್ಯತೆ ನೀಡಲಾಗುವುದು. ನಂತರ‌ ಯಾಕೆ ಗೇಟ್ ತುಂಡಾಗಿದೆ. ಅದಕ್ಕೆ ಕಾರಣವೇನು. ಟಿನಿ ಬೋರ್ಡ್ ಅಧಿಕಾರಿಗಳ ಕಾರ್ಯವೈಖರಿ ಇನ್ನಿತರ ಅಂಶಗಳ ಕುರಿತು ತನಿಖೆ ನಡೆಸುತ್ತೇವೆಂದು ತಿಳಿಸಿದರು.

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…