ಕೊಪ್ಪಳ : ತುಂಗಭದ್ರಾ ಜಲಾಶಯದ 19ನೇ ಗೇಟ್ ತುಂಡಾಗಿದ್ದು, ಮಂಗಳವಾರ ವೀಕ್ಷಣೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ.
ಆ.13ರಂದು ಬೆಳಗ್ಗೆ ಸಿಎಂ ವಿಶೇಷ ವಿಮಾನ ಮೂಲಕ ಕೊಪ್ಪಳ ತಾಲೂಕಿನ ಗಿಣಿಗೇರಿ ಬೆಳೆಯ ಲಘು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ನಂತರ ರಸ್ತೆ ಮೂಲಕ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುವರು. ನಂತರ ಅಧಿಕಾರಿಗಳು, ತಜ್ಞರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ತುಂಬಿದ ತುಂಗಭದ್ರೆಗೆ ಬಾಗಿನ ಅರ್ಪಿಸಲು ಆ.6ರಂದು ಬರಬೇಕಿತ್ತು. ಆದರೆ, ಮುಡಾ ಹಗರಣ, ಪಾದಯಾತ್ರೆ ಇನ್ನಿತರ ವಿಷಯ ಕಾರಣ ಆ.10ಕ್ಕೆ ಮುಂದೂಡಿಕೆ ಆಯಿತು. ಕಾರಣಾಂತರಗಳಿಂದ ಮತ್ತೆ ಆ.13ರಂದು ಬರಲು ನಿರ್ಧರಿಸಿದ್ದರು. ಆದರೆ, ಆ.10ರ ಮಧ್ಯರಾತ್ರಿಯೇ ಗೇಟ್ ಕೊಚ್ಚಿ ಹೋಗಿದ್ದು ಬಾಹಿನ ಅರ್ಪಿಸಲು ಬರಬೇಕಾದವರು ಗೇಟ್ ದುರಸ್ತಿ ಕಾರ್ಯ ವೀಕ್ಷಿಸಲು ಬರುವಂತಾಗಿದೆ.