ಜ.31ರೊಳಗೆ ಸಾಲಮನ್ನಾ

<ಸಿಎಂ ಕುಮಾರಸ್ವಾಮಿ ಭರವಸೆ>ವಿರೋಧಿಗಳಿಂದ ಸುಳ್ಳು ಹೇಳಿಕೆ>

ಕೊಪ್ಪಳ: ಸಾಲಮನ್ನಾ ಕುರಿತು ವಿರೋಧಿಗಳು ಅಪಪ್ರಚಾರ ನಡೆಸಿದ್ದಾರೆ. ಜ.31ರೊಳಗೆ ಸಾಲಮನ್ನಾ ಮಾಡಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ತಾಲೂಕಿನ ಬಸಾಪುರ ಬಳಿಯ ಖಾಸಗಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಲ ಮನ್ನಾ ಯೋಜನೆಗೆ ನೀರಾವರಿ ಇಲಾಖೆ ಅನುದಾನ ಸೇರಿ ಇತರ ಇಲಾಖೆ ಹಣ ಬಳಸಲಾಗುತ್ತಿದೆ ಎಂದು ಸುಳ್ಳು ಹೇಳಲಾಗುತ್ತಿದೆ. ಅಭಿವೃದ್ಧಿ ಕೆಲಸ ಬೇರೆ, ಸಾಲಮನ್ನಾ ಬೇರೆ. ಇದಕ್ಕೆ ಬೇರೆ ರೀತಿಯಲ್ಲಿ ಹಣ ಹೊಂದಾಣಿಕೆ ಮಾಡಲಾಗುತ್ತಿದೆ. 46 ಸಾವಿರ ಕೋಟಿ ರೂ. ಮನ್ನಾ ಮಾಡುವುದು ಸುಲಭವಲ್ಲ. ಇಷ್ಟೊಂದು ಮೊತ್ತದ ಸಾಲಮನ್ನಾ ಯಾರು ಮಾಡಿದ್ದಾರೆ ? ಉತ್ತರ ಪ್ರದೇಶದಲ್ಲಿ 2017ರಲ್ಲಿಯೇ ಸಾಲಮನ್ನಾ ಮಾಡಲಾಗಿದ್ದು, ಈವರೆಗೆ ಶೇ.40ರಷ್ಟು ಮಾತ್ರ ಮನ್ನಾ ಆಗಿದೆ. ತಮಿಳುನಾಡು ಸೇರಿ ಇತರ ರಾಜ್ಯಗಳ ರೈತರು ಸಾಲಮನ್ನಾಕ್ಕೆ ಆಗ್ರಹಿಸಿ ದೆಹಲಿಯಲ್ಲಿ ಬೆತ್ತಲೆ ಪ್ರತಿಭಟನೆ ನಡೆಸಿದರೆ ಯಾರು ಕೇಳಲಿಲ್ಲ. ಕೆಲ ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ ರೈತರ ಹೆಸರಿನಲ್ಲಿ ಬ್ಯಾಂಕ್ ನಿರ್ದೇಶಕರು, ಆಡಳಿತ ಮಂಡಳಿ ಹಣ ಲೂಟಿ ಮಾಡುತ್ತಿದೆ. ಇದೆಲ್ಲವನ್ನು ಗುರುತಿಸಲೆಂದೆ ಕೆಲ ಷರತ್ತು ಮಾಡಲಾಗಿದೆ. ಆದರೆ, ಸಾಲಮನ್ನಾ ಬಗ್ಗೆ ಲಘುವಾಗಿ ಮಾತನಾಡಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಯಾವನ್ರಿ ಇಷ್ಟೊಂದು ಸಾಲಮನ್ನಾ ಮಾಡ್ತಾನೆ ಎಂದು ಗುಡುಗಿದರು.