ಪ್ರಕರಣ ಹಿಂಪಡೆಯಲು ಸಂಘಟನೆಗಳ ಒತ್ತಡ

ಕೊಪ್ಪಳ : ಸಾಹಿತಿಗಳು, ಮಾನವ ಹಕ್ಕು ಹೋರಾಟಗಾರರು, ದಲಿತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಲು ಪ್ರಗತಿಪರ ಸಂಘಟನೆಗಳು ಒತ್ತಾಯಿಸಿದೆ.

ಸಂಘಟನೆಗಳ ಪದಾಧಿಕಾರಿಗಳು ನಗರದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿದರು. ಮಾನವ ಹಕ್ಕ ಹೋರಾಟಗಾರ ಆನಂದ್ ತೇಲ್ತುಂಬ್ಬೆ ವಿರುದ್ಧ ಮಹಾರಾಷ್ಟ್ರ ಸರ್ಕಾರ ರಾಷ್ಟ್ರದ್ರೋಹಕ್ಕೆ ಸಮಾನವಾದ ಪ್ರಕರಣ ದಾಖಲಿಸಿದೆ. ಪ್ರಕರಣ ಕೈಬಿಟ್ಟು, ಅವರಲ್ಲಿ ಕ್ಷಮೆಯಾಚಿಸಬೇಕು. ಭೀಮಾ ಕೊರೆಗಾಂವ್ ಹಿಂಸಾಚಾರ ಹೆಸರಿನಲ್ಲಿ ಬಂಧಿಸಿರುವ ಎಲ್ಲ ಮಾನವ ಹಕ್ಕುಗಳ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು. ಈ ಹಿಂಸಾಚಾರದ ಒಳಸಂಚು ರೂಪಿಸಿದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖಂಡರಾದ ಮಿಲಿಂದ್ ಏಕಬೋಡೆ, ಸಾಂಬಾಜಿ ಬಿಢೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಸುಂಕಪ್ಪ ಗದಗ, ಬಸವರಾಜ ಶೀಲವಂತರ್, ಕಾಸೀಂ ಸರ್ದಾರ್, ಮಹಾಂತೇಶ್ ಕೊತಬಾಳ, ವಿಠ್ಠಪ್ಪ ಗೋರಂಟ್ಲಿ, ಕೆ.ಬಿ. ಗೋನಾಳ್ ಇತರರು ಇದ್ದರು.