ಈಶ್ವರಪ್ಪ ಮಹಾ ಪೆದ್ದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಕೊಪ್ಪಳ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​. ಈಶ್ವರಪ್ಪ ಪೆದ್ದ, ಅವರ ಹೇಳಿಕೆಗೆ ನಾನು ರಿಯಾಕ್ಟ್​ ಮಾಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವ್ಯಂಗ್ಯವಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಗುಮಾಸ್ತನ ರೀತಿಯಲ್ಲಿ ಪತ್ರ ಬರೆಯುತ್ತಾರೆ ಎಂದು ಈಶ್ವರಪ್ಪ ಅವರು ವ್ಯಂಗ್ಯವಾಡಿದ್ದರು. ಕೊಪ್ಪಳ ತಾಲೂಕಿನ ಬಸಾಪುರ ಸಮೀಪದ ಖಾಸಗಿ ವಿಮಾನ ನಿಲ್ದಾಣದಲ್ಲಿ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ಕೈಸನ್ನೆ ಮೂಲಕ ಈಶ್ವರಪ್ಪ ಅವರಿಗೆ ತಲೆ ಸರಿ ಇಲ್ಲ ಎಂದು ವ್ಯಂಗ್ಯವಾಡಿದರು.

ಇದೇ ಸಂದರ್ಭದಲ್ಲಿ ನಾನು ಯಾವುದೇ ಕ್ಷೇತ್ರದಿಂದಲೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್​ ಮೈತ್ರಿ ಇರುತ್ತದೆ. ಇಕ್ಬಾಲ್​ ಅನ್ಸಾರಿ ಮತ್ತು ಶಿವರಾಮೇಗೌಡ ಅವರು ಜೆಡಿಎಸ್​ ಬಗ್ಗೆ ಮಾತನಾಡಿರುವುದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಸಿದ್ದರಾಮಯ್ಯ ತಿಳಿಸಿದರು.

Leave a Reply

Your email address will not be published. Required fields are marked *