ಕೊಪ್ಪಳ: ಸಹಕಾರ ಸಂಸ್ಥೆಗೆ ರೈತರೆ ಉಸಿರು. 62 ವರ್ಷಗಳಿಂದ ರೈತರಿಗೆ ಸ್ಪಂದಿಸುತ್ತಾ ರಾಜ್ಯದಲ್ಲಿಯೇ ಮಾದರಿ ಸಹಕಾರ ಸಂಘ ನಮ್ಮದಾಗಿದ್ದು ಎಲ್ಲ ಸದಸ್ಯರಿಗೂ ಹೆಮ್ಮೆಯ ಸಂಗತಿ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸತ ಹಾಗೂ ಇಪ್ಕೋ ಆರ್ಜಿಬಿ ಸದಸ್ಯ ಅಮರೇಶ ಉಪಲಾಪುರ ಹೇಳಿದರು.
ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ 63ನೇ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿದರು.
ಕಿನ್ನಾಳ ಗ್ರಾಮ ಇಲ್ಲಿಯ ಗೊಂಬೆ ಕಲೆ ಹಾಗೂ ಕೃಷಿ ಸಹಕಾರ ಸಂಘದಿಂದ ಹೆಸರುವಾಸಿಯಾಗಿದೆ. ನಮ್ಮ ಸಂಘದಿಂದ ಕೃಷಿ ಸಾಲ 7.80 ಕೋಟಿ ರೂ., ಕೃಷಿಯೇತರ 35.58 ಕೋಟಿ ರೂ., 78ಲಕ್ಷ ಠೇವಣಿ ಹೊಂದಿದ್ದು ರೈತರ ಉಸಿರಾಗಿ ಸೇವೆ ಸಲ್ಲಿಸುತ್ತಿದೆ. ಸಂಘದಲ್ಲಿ 3,800 ಸದಸ್ಯರಿದ್ದು ಸಹಕಾರ ತ್ಯಾಗದಿಂದ 4 ರಾಜ್ಯ ಮಟ್ಟದ ಪ್ರಶಸ್ತಿ ಸೇರಿ 24 ಪ್ರಶಸ್ತಿಗಳು ನಮ್ಮ ಸಹಕಾರಿಗೆ ಲಭಿಸಿದ್ದು ಎಲ್ಲ ಸದಸ್ಯರಿಗೆ ಗೌರವ ಸಲ್ಲಬೇಕಾಗಿದೆ ಎಂದರು.
ರವೀಂದ್ರನಾಥ ಕೋಲ್ಕಾರ, ಉಪಧ್ಯೆ ಮಲ್ಲಮ್ಮ ಕಾರಬ್ಯಾಳಿ, ನೀರ್ದೆಶಕರಾದ ವಿರಭದ್ರಪ್ಪ ಗಂಜಿ, ಮಹಾದೇವಯ್ಯ ಹಿರೇಮಠ, ಕೆ.ಮಲ್ಲಿಕಾರ್ಜುನ, ಬಸವರಾಜ ಚಿಲವಾಡಗಿ, ವಿರುಪಾಕ್ಷಪ್ಪ ಐತಾಪೂರ, ನಿಂಗಪ್ಪ ಕುಣಿ, ಮೊನೇಶ ಕಳ್ಳಿಮನಿ, ಈರಣ್ಣ ವಾಲ್ಮೀಕಿ, ಮಾಲ ಹಡಗಲಿ, ಬ್ಯಾಂಕ್ ಪ್ರತಿನಿಧಿ ಶಿವುಕುಮಾರ ಮೇಳಿ, ಗ್ರಾಪಂ ಅಧ್ಯೆ ಕರಿಯಮ್ಮ ಉಪ್ಪಾರ, ಇಪ್ಕೋ ವ್ಯವಸ್ಥಾಪಕ ರಾಘವೇಂದ್ರ ಇತರರು ಇದ್ದರು.