ದೇಶದಲ್ಲಿ ಮಕ್ಕಳನ್ನು ಹುಟ್ಟಿಸುವುದರಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ: ಮಾಜಿ ಸಚಿವ ಆಂಜನೇಯ

ಕೊಪ್ಪಳ: ಭಾರತದಲ್ಲಿ ಸಮಾನತೆ ಇಲ್ಲ. ಜಾತೀಯತೆ ಹೋಗಿಲ್ಲ. ಆದರೆ, ಮಕ್ಕಳನ್ನು ಹುಟ್ಟಿಸುವುದರಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ ಎಂದು ಮಾಜಿ ಸಚಿವ ಎಚ್‌. ಆಂಜನೇಯ ತಿಳಿಸಿದ್ದಾರೆ.

ಕುಷ್ಟಗಿ ಪಟ್ಟಣದಲ್ಲಿ ದೇವದಾಸಿ ತಾಯಂದಿರ ಮಕ್ಕಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿ, ‘ಮಕ್ಕಳನ್ನು ಹುಟ್ಟಿಸೋದ್ರಲ್ಲಿ ಇಂಡಿಯಾ ನಂಬರ್ 1’. ಭಾರತಕ್ಕೆ ಬಹುಮಾನ ಸಿಗಬೇಕಾದರೆ ಮಕ್ಕಳನ್ನು ಹುಟ್ಟಿಸುವುದರಲ್ಲಿ ಮಾತ್ರ. ಇಲ್ಲಿ ಸಮಾನತೆ ಇಲ್ಲ, ಜಾತೀಯತೆ ಹೋಗಿಲ್ಲ. ನನಗೀಗ ಎರಡು ಮಕ್ಕಳಷ್ಟೆ. ನೀವು ಕೂಡ ಮಕ್ಕಳ ಜನನಕ್ಕೆ ಬ್ರೇಕ್‌ ಹಾಕಿ ಎಂದು ಹೇಳಿದ್ದಾರೆ.

ದೇವರನ್ನು ಹೆಚ್ಚು ಪೂಜೆ ಮಾಡಬೇಡಿ. ದೇವರನ್ನು ಪೂಜೆ ಮಾಡಿ ಹಾಳಾಗಿ ಹೋಗಿದ್ದೀರ. ಬೇರೆಯವರು ಹೋಳಿಗೆ ಪೂಜೆ ಮಾಡಿ ಆರಾಮಗಿದ್ದಾರೆ. ಆದರೆ, ನೀವು ಕುರಿ, ಕೋಳಿ, ಕೋಣ ಕಡಿದು, ಕುಡಿದು ಹಾಳಾಗಿದ್ದೀರ. ಸಾಲ ಮಾಡಿ ದುರ್ಗಮ್ಮ ಜಾತ್ರೆ, ದ್ಯಾವಮ್ಮ ಜಾತ್ರೆ ಮಾಡಿ ಹಾಳಾಗಿ ಹೋಗುತ್ತಿದ್ದೀರ. ಅದನ್ನು ಬಿಟ್ಟು ಕಾಯಕವೇ ಕೈಲಾಸ ಎನ್ನುವಂತೆ ಶ್ರದ್ಧೆಯಿಂದ ಕಾಯಕ ಮಾಡಿ ಎಂದು ತಿಳಿಸಿದರು.

Leave a Reply

Your email address will not be published. Required fields are marked *