More

    ಗವಿಮಠ ಆವರಣದಲ್ಲಿ ಪೊಲೀಸರಿಂದ ಸ್ವಚ್ಛತಾ ಕಾರ್ಯ

    ಕೊಪ್ಪಳ: ನಗರದ ಗವಿಮಠ ಆವರಣದಲ್ಲಿ ಶುಕ್ರವಾರ ಪೊರಕೆ ಹಿಡಿದು ಕಸ ಗೂಡಿಸುವ ಮೂಲಕ ಕಾನೂನು, ಸುವ್ಯವಸ್ಥೆ ಕಾಪಾಡುವುದಲ್ಲದೆ, ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವೆವೆಂದು ನಗರ ಪೊಲೀಸರು ತೋರಿಸಿಕೊಟ್ಟಿದ್ದಾರೆ.

    ಜಾತ್ರಾ ಆವರಣದಲ್ಲಿ ಬೆಳಗ್ಗೆಯೇ ಪೊರಕೆ ಹಿಡಿದು ಎಸ್ಪಿ ಜಿ.ಸಂಗೀತಾ ತಮ್ಮ ತಂಡದೊಂದಿಗೆ ಕಸ ಗೂಡಿಸಿದರು. ಬೆಳಗ್ಗೆ 5.30 ರಿಂದ 8ಗಂಟೆವರೆಗೆ ಆವರಣದಲ್ಲಿ ಬಿದ್ದಿದ್ದ ಕಸ, ಪ್ಲಾಸ್ಟಿಕ್ ಹಾಳೆಗಳನ್ನು ಗುಡಿಸಿ ಕಸದ ವಾಹನಕ್ಕೆ ಎತ್ತಿ ಹಾಕಿದರು.

    ಅಲ್ಲದೆ, ಪೌರ ಕಾರ್ಮಿಕರಿಗ ಬೆಳಗಿನ ಉಪಾಹಾರವನ್ನು ಬಡಿಸಿದರು. ಅವರೊಂದಿಗೆ 200ಕ್ಕೂ ಅಧಿಕ ಪೊಲೀಸರು ಗವಿಮಠದ ಗುಡ್ಡ, ದಾಸೋಹ ಭವನ, ಜಾತ್ರಾ ಆವರಣ, ರಸ್ತೆ, ಮೊದಲಾದೆಡೆ ಸ್ವಚ್ಛತಾ ಕಾರ್ಯ ಮಾಡಿದರು. ಡಿ.ಸಿ.ಪಿ ಶಶಿಧರ, ಅಸಿಸ್ಟೆಂಟ್ ಕಮಾಂಡೆಂಟ್ ಸತೀಶ ಇ, ಆರ್.ಪಿ.ಐ ನಿಂಗಪ್ಪ, ಸಿಪಿಐಗಳಾದ ಮೌನೇಶ್ವರ ಪಾಟೀಲ, ಮಹಾಂತೇಶ ಸಜ್ಜನ್, ನಾಗರೆಡ್ಡಿ. ಪಿಎಸ್‌ಐ ಗಳಾದ ಸುರೇಶ, ಬಸವರಾಜ, ಸುಪ್ರೀತ್ ಪಾಟೀಲ, ದುರ್ಗಪ್ಪ ಪಾಟೀಲ, ಮದಕರಿನಾಯಕ ಸೇರಿ ಇತರರಿದ್ದರು. ಇವರೊಂದಿಗೆ ಸ್ವಾಮಿ ವಿವೇಕಾನಂದ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್ಸ್‌ ಮತ್ತು ರೇಂಜರ್ಸ್‌ ವಿಭಾಗದಿಂದ 30 ಕ್ಕೂ ಹೆಚ್ಚೂ ವಿದ್ಯಾರ್ಥಿಗಳು, ಕುಷ್ಟಗಿಯ 20 ವಿದ್ಯಾರ್ಥಿಗಲು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇವರ ಸೇವೆ ಮೆಚ್ಚಿ ಗವಿಶ್ರೀಗಳು ಆಶೀರ್ವದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts