Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಕೊಪ್ಪಳ ಎಸ್‌ಪಿ ಅನೂಪ್ ಶೆಟ್ಟಿ ವರ್ಗಾ: ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗ

Tuesday, 13.03.2018, 6:24 PM       No Comments

ಕೊಪ್ಪಳ: ಕೊಪ್ಪಳ ಎಸ್‌ಪಿ ಅನೂಪ್ ಶೆಟ್ಟಿ ವರ್ಗಾವಣೆ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣ(ಸಿಎಟಿ) ಮಾ. 27 ರವೆರೆಗೆ ತಡೆಯಾಜ್ಞೆ ನೀಡಿದ್ದು, ರಾಜ್ಯ ಸರ್ಕಾರ ಮತ್ತೊಂದು ಮುಖಭಂಗ ಅನುಭವಿಸುವಂತಾಗಿದೆ.

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ವಿಷಯದಲ್ಲಿ ಮೊದಲ ಮುಖಭಂಗ ಅನುಭವಿಸಿತ್ತು. ಈಗ ಕೊಪ್ಪಳ ಎಸ್ಪಿ ಪ್ರಕರಣ ಎರಡನೆಯದಾಗಿದೆ. ಅವಧಿಗೂ ಮುನ್ನದ ತಮ್ಮ ವರ್ಗಾವಣೆ ಪ್ರಶ್ನಿಸಿ ಸರ್ಕಾರಕ್ಕೆ ಸೆಡ್ಡು ಹೊಡೆದ ಎಸ್‌ಪಿ ಡಾ.ಅನೂಪ್ ಶೆಟ್ಟಿ ಸಿಎಟಿ ಮೆಟ್ಟಿಲೇರಿದ್ದು, ಮೊದಲ ಹಂತದ ಜಯ ಸಾಧಿಸಿದ್ದಾರೆ.

ಮಾ. 9ರಂದು ಸರ್ಕಾರ ಹೊರಡಿಸಿದ ಈಪಿಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಎಸ್ಪಿ ಅನೂಪ್ ಶೆಟ್ಟಿಯನ್ನು ಬೆಂಗಳೂರಿನ ಗುಪ್ತಚರ ಇಲಾಖೆಗೆ ವರ್ಗಗೊಳಿಸಲಾಗಿತ್ತು. ಅಲ್ಲದೇ, ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆಯ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ ರೇಣುಕಾ ಕೆ. ಸುಕುಮಾರ ಅವರನ್ನು ಕೊಪ್ಪಳ ಎಸ್ಪಿಯಾಗಿ ವರ್ಗಗೊಳಿಸಿತ್ತು. ಅವಧಿಗೂ ಮುನ್ನವೇ ವರ್ಗವಣೆಗೊಳಿಸಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹಾಗೂ ಸರ್ಕಾರದ ಆದೇಶಕ್ಕೆ ತಡೆಕೋರಿ ಅನೂಪ್ ಶೆಟ್ಟಿ ಸಿಎಟಿ ಮೊರೆ ಹೋಗಿದ್ದರು. ಇದೀಗ ಸಿಎಟಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಸರ್ಕಾರಕ್ಕೆ ಮತ್ತೊಮ್ಮೆ ಮುಜುಗರವಾಗಿದೆ.

 

 

Leave a Reply

Your email address will not be published. Required fields are marked *

Back To Top