ನನ್ನ ನೆಚ್ಚಿನ ಕನ್ನಡ ಹೊತ್ತಗೆ

ನಾಡು-ನುಡಿ ಬಗ್ಗೆ ಕನ್ನಡಿಗರಿಗೆ ಇರುವ ಅಭಿಮಾನ ಅಪಾರ. ಇಲ್ಲಿನ ನೆಲ-ಜಲ-ಭಾಷೆ ವಿಚಾರದಲ್ಲಿ ಎಂತಹ ಹೋರಾಟಕ್ಕೂ ಹಿಂಜರಿಯರು. ಅಂತೆಯೇ ಕನ್ನಡ ಪುಸ್ತಕಗಳ ಮೇಲಿನ ಪ್ರೀತಿಯೂ ಹೆಚ್ಚು. 63ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರೇಮಿಗಳು ತನ್ನ ನೆಚ್ಚಿನ ಪುಸ್ತಕದ ಜತೆ ಸೆಲ್ಫಿ ತೆಗೆದು ಕಳುಹಿಸಲು ವಿಜಯವಾಣಿ ಅವಕಾಶ ಮಾಡಿಕೊಟ್ಟಿತ್ತು. ನಮ್ಮ ಈ ಕರೆಗೆ ಸ್ಪಂದಿಸಿ ಅಪಾರ ಸಂಖ್ಯೆಯಲ್ಲಿ ಸೆಲ್ಫಿಗಳು ಬಂದಿವೆ. ಇವುಗಳ ಪೈಕಿ ಕೊಪ್ಪಳ ಜಿಲ್ಲೆಯ ಆಯ್ದ ಕೆಲವನ್ನು ಪ್ರಕಟಿಸುತ್ತಿದ್ದೇವೆ.