ವಿಜಯನಗರಕ್ಕೆ ಕೂಡ್ಲಿಗಿ ತಾಲೂಕು ಸೇರಿಸಿ

ರೈತ ಸಂಘ, ಹಸಿರು ಸೇನೆ ಜಿಲ್ಲಾ ಘಟಕ ಮನವಿ


ಕೂಡ್ಲಿಗಿ: ವಿಜಯನಗರ ಜಿಲ್ಲೆ ರಚನೆಯಾಗಬೇಕು. ಅದರ ವ್ಯಾಪ್ತಿಗೆ ಕೂಡ್ಲಿಗಿ ತಾಲೂಕು ಸೇರಿಸಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಸೊಮವಾರ ಗ್ರೇಡ್-2 ತಹಸೀಲ್ದಾರ್ ಅರುಂಧತಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ಸಂಘದ ಜಿಲ್ಲಾ ಅಧ್ಯಕ್ಷ ದೇವರಮನಿ ಮಹೇಶ್ ಮಾತನಾಡಿ, ಕೂಡ್ಲಿಗಿ ತಾಲೂಕಿನ ಪಾಳೇಗಾರರು ವಿಜಯನಗರ ಸಾಮ್ರಾಜ್ಯಕ್ಕೂ ಅವಿನಾಭಾವ ಸಂಬಂಧವಿದೆ. ಈಗ ಶಿಕ್ಷಣ, ಆರೋಗ್ಯ, ವ್ಯಾಪಾರ ಸೇರಿ ಇತರ ಕಾರಣಗಳಿಂದ ತಾಲೂಕಿನ ಜನರು ಹೊಸಪೇಟೆಯನ್ನು ಅವಲಂಬಿಸಿದ್ದಾರೆ. ಅಲ್ಲದೆ ಕೂಡ್ಲಿಗಿಯಿಂದ ನೇರವಾಗಿ ಬಸ್ ಸೌಲಭ್ಯವಿದ್ದು, ಎಲ್ಲ ವಿಧದಲ್ಲೂ ಅನುಕೂಲವಾಗಿದೆ. ಆದ್ದರಿಂದ ನೂತನ ವಿಜಯನಗರ ಜಿಲ್ಲೆ ಸ್ಥಾಪನೆ ಜತೆಗೆ ಕೂಡ್ಲಿಗಿ ತಾಲೂಕನ್ನು ಸೇರಿಸುವ ಮೂಲಕ ಈ ಭಾಗದ ಜನರು ಹಲವು ದಿನಗಳ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಸೋಮಪ್ಪ, ತಾಲೂಕು ಅಧ್ಯಕ್ಷ ಕೆ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಪಕ್ಕೀರಪ್ಪ, ರೈತ ಮುಖಂಡರಾದ ಆರ್.ನಿಂಗಪ್ಪ, ಎಚ್.ಪರಶಪ್ಪ, ರಾಜಾಸಾಬ್, ಮೌಲಾ ಹುಸೇನ್, ಎಂ.ಶರಣಪ್ಪ, ಕಡ್ಡಿ ಮಂಜುನಾಥ, ತಾಲೂಕು ಅಧ್ಯಕ್ಷ ಜಿ. ಈಶಪ್ಪ, ಜೆ. ನಾಗರಾಜ ಇತರರಿದ್ದರು.

Leave a Reply

Your email address will not be published. Required fields are marked *