ಬಂಗಾರ ಕಲಶದ ದರ್ಶನ ಪಡೆದ ಭಕ್ತರು

ಕೂಡಲಸಂಗಮ: ಕ್ಷೇತ್ರಾಧಿಪತಿ ಸಂಗಮನಾಥನ ಜಾತ್ರೋತ್ಸವಕ್ಕೆ ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಬಂಗಾರ ಕಲಶದ ದರ್ಶನ ಪಡೆದು ಪುನೀತರಾದರು.

ಬಾಗಲಕೋಟೆಯ ವಿವಿಧ ವ್ಯಾಪಾರಿಗಳು ಮಂಗಳವಾರ ಸಂಜೆ 6.30ರಿಂದ 7.30ಕ್ಕೆ ಕಲಶಕ್ಕೆ ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ಭಕ್ತರು ಮಲ್ಲಾಪುರ, ಭಗವತಿ, ಬೇವೂರ, ಕಿರಸೂರ, ಹಳ್ಳೂರ ಮಾರ್ಗದ ಮೂಲಕ ಕಲಶ ಹೊತ್ತು ಕೂಡಲಸಂಗಮಕ್ಕೆ ತಂದರು. ಮಾರ್ಗದುದ್ದಕ್ಕೂ ಭಕ್ತರು ಪಾದಯಾತ್ರಿಕರಿಗೆ ಪ್ರಸಾದ, ತಂಪು ಪಾನಿಯ, ಹಣ್ಣು ಹಂಪಲು ನೀಡಿದರು. 20 ಸಾವಿರಕ್ಕೂ ಅಧಿಕ ಭಕ್ತರು ಬರಿಗಾಲಿನಲ್ಲಿ ನಡೆಯುತ್ತ ಕಲಶದ ಜತೆ ಬಂದರು.

ಕೂಡಲಸಂಗಮಕ್ಕೆ ಬೆಳಗ್ಗೆ 9ಕ್ಕೆ ಕಲಶ ಆಗಮಿಸುತ್ತಿದ್ದಂತೆ ವಿವಿಧ ಕಲಾತಂಡಗಳು ನೃತ್ಯ ಪ್ರದರ್ಶನ ಮಾಡಿದರು. ನಂತರ ಸಂಗಮೇಶ್ವರ ದೇವಾಲಯಕ್ಕೆ ಆಗಮಿಸಿದ ಕಲಶಕ್ಕೆ ಪೂಜೆ ಸಲ್ಲಿಸಿ ಸಂಗಮೇಶ್ವರ ದೇವಾಲಯದಿಂದ ಕೂಡಲಸಂಗಮದ ಅಗಸಿಯ ಹತ್ತಿರ ಇರುವ ಕಲಶದ ಕಟ್ಟೆಯವರೆಗೆ ಮೆರವಣಿಗೆ ಮಾಡಲಾಯಿತು.

Leave a Reply

Your email address will not be published. Required fields are marked *