ಶಾಶ್ವತ ಪರಿಹಾರಕ್ಕಾಗಿ ಪಕ್ಷಾತೀತ ಹೋರಾಟ

ಕೂಡಲಸಂಗಮ: ಹುನಗುಂದ ತಾಲೂಕಿನ ಪ್ರವಾಹಪೀಡಿತ ಗ್ರಾಮಗಳ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಪಕ್ಷಾತೀತ ಹೋರಾಟಕ್ಕೆ ಸಿದ್ಧ ಎಂದು ಎಸ್‌ಆರ್‌ಎನ್‌ಇ ಫೌಂಡೇಷನ್ ಅಧ್ಯಕ್ಷ ಎಸ್.ಆರ್. ನವಲಿಹಿರೇಮಠ ಹೇಳಿದರು.

ಎಸ್‌ಆರ್‌ಎನ್‌ಇ ೌಂಡೇಷನ್ ನೇತೃತ್ವದಲ್ಲಿ ಕೂಡಲಸಂಗಮದ ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಆವರಣದಲ್ಲಿ ಸೋಮವಾರ ಜರುಗಿದ ಹುನಗುಂದ ತಾಲೂಕಿನ ಪ್ರವಾಹ ಸಂತ್ರಸ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹಪೀಡಿತ ಗ್ರಾಮಗಳ ಹೋರಾಟ ಸಮಿತಿ ಅಸ್ತಿತ್ವದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಪ್ರವಾಹದಿಂದ ತಾಲೂಕಿನ 40 ಗ್ರಾಮಗಳ ಜನರು ಬದುಕು ಬೀದಿಗೆ ಬಿದ್ದಿದೆ. ಅವರಿಗೆ ಶಾಶ್ವತ ನೆಲೆ ಕಲ್ಪಿಸುವುದೇ ಹೋರಾಟದ ಮುಖ್ಯ ಉದ್ದೇಶವಾಗಿದೆ ಎಂದರು.

ಇನ್ನೊಮ್ಮೆ ಗ್ರಾಮಗಳ ಪ್ರಮುಖರ ಸಭೆ ನಡೆಸಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರನ್ನೊಳಗೊಂಡ ಸಂತ್ರಸ್ತರ ಹೋರಾಟ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಸಮಿತಿ ಕೈಗೊಳ್ಳುವ ಹೋರಾಟಕ್ಕೆ ಎಸ್‌ಆರ್‌ಎನ್‌ಇ ೌಂಡೇಷನ್ ನೈತಿಕ ಹಾಗೂ ಆರ್ಥಿಕ ಬೆಂಬಲ ನೀಡುವುದರೊಂದಿಗೆ ಕೊನೆಯವರೆಗೂ ಜತೆಯಾಗಿ ನಿಲ್ಲಲಿದೆ ಎಂದರು.

ಕೃಷ್ಣಾ, ಮಲಪ್ರಭಾ ನದಿಗಳ ಪ್ರವಾಹ ಹಾಗೂ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ತಾಲೂಕಿನಲ್ಲಿ 44ಕ್ಕೂ ಹೆಚ್ಚು ಗ್ರಾಮಗಳು ಬಾಧಿತಗೊಂಡಿದ್ದರೂ ಕೇವಲ 23 ಗ್ರಾಮಗಳನ್ನು ಮಾತ್ರ ಯುಕೆಪಿ ಮಾದರಿಯಲ್ಲಿ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಅವುಗಳಲ್ಲಿಯೂ ಕೆಲ ಪುನರ್ವಸತಿ ಕೇಂದ್ರಗಳಿಗೆ ಮೂಲಸೌಲಭ್ಯಗಳನ್ನು ಪುನರ್ವಸತಿ ಸಮರ್ಪಕ ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ ಮಾತನಾಡಿ, ಸಂತ್ರಸ್ತರ ವಿಷಯದಲ್ಲಿ ರಾಜಕೀಯ ಸಲ್ಲ. ಹೋರಾಟ ಸಮಿತಿ ಕೈಗೊಳ್ಳುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಕೂಡಲಸಂಗಮ ಕ್ರಾಂತಿ ರಂಗ ಸ್ವಯಂ ಸೇವಾ ಸಂಘದ ಅಧ್ಯಕ್ಷ ತೀರ್ಥಲಿಂಗ ಬೆಳಗಲ್ಲ ಮಾತನಾಡಿದರು. ಎಂ.ಎಸ್. ಪಾಟೀಲ, ಮಹಾಂತೇಶ ಅಂಗಡಿ, ಕೆ.ಎನ್. ಗುಡಿ, ಬಸಯ್ಯ ಹಿರೇಮಠ, ಎಲ್.ಎಂ. ಪಾಟೀಲ, ಮಹಾಂತೇಶ ಉಂಡೋಡಿ, ಮಹಾಂತೇಶ ನಾಡಗೌಡ, ಶಶಿಕಾಂತ ಬಂಡರಗಲ್ಲ, ಗುರು ಗಾಣಿಗೇರ, ಷಡಕ್ಷರಯ್ಯ ಹಿರೇಮಠ, ಶೇಖರಗೌಡ ಗೌಡರ, ವಿಜಯಮಹಾಂತೇಶ ಗದ್ದನಕೇರಿ ಇತರರಿದ್ದರು.

ಹೋರಾಟ ಸಮಿತಿ ಕೈಗೊಳ್ಳುವ ನಿರ್ಣಯವನ್ನು ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲರ ಮೂಲಕವೇ ಸರ್ಕಾರದ ಮುಂದೆ ಮಂಡನೆ ಮಾಡಲಾಗುವುದು. ಬೇಡಿಕೆಗಳ ಇಡೇರಿಕೆಗೆ ಗಡುವು ನೀಡಲಾಗುವುದು. ಗಡುವಿನೊಳಗೆ ಬೇಡಿಕೆ ಈಡೇರದಿದ್ದರೆ ಹೋರಾಟಕ್ಕೂ ಸಿದ್ಧರಾಗಬೇಕು. ನಿಮ್ಮೆಲ್ಲರ ಬೆಂಬಲ ಬೇಕು.
= ಎಸ್.ಆರ್. ನವಲಿಹಿರೇಮಠ ಎಸ್‌ಆರ್‌ಎನ್‌ಇ ಫೌಂಡೇಷನ್ ಅಧ್ಯಕ್ಷ

 

Leave a Reply

Your email address will not be published. Required fields are marked *