More

    ವಚನ ಸಾಹಿತ್ಯ ಅಧ್ಯಯನ ಮಾಡಿ

    ಕೂಡಲಸಂಗಮ: ಭಗವದ್ಗೀತೆ ಶಾಂತಿ ಹೇಳಲ್ಲ, ಯುದ್ಧ ಹೇಳುವುದು. ಬಸವಣ್ಣ ಯಾವ ಸಂದರ್ಭದಲ್ಲೂ ರಕ್ತದಲ್ಲಿ ಮುಳುಗಿಸುವಂತಹ ಕೆಲಸ ಮಾಡಲಿಲ್ಲ, ದ್ವೇಷ ಬೆಳೆಸಲಿಲ್ಲ. ಶಾಂತಿ ಮೂಲಕ ಎಲ್ಲರಿಗೂ ಸಮಾನತೆ ಕೊಟ್ಟ ಎಂದು ಹಿರಿಯ ಸಾಹಿತಿ ಡಾ.ಬಿ.ಟಿ. ಲಲಿತಾನಾಯಕ ಹೇಳಿದರು.

    ಕೂಡಲಸಂಗಮ ಬಸವ ಧರ್ಮ ಪೀಠದ ಆವರಣದಲ್ಲಿ 33ನೇ ಶರಣ ಮೇಳದ ಮೂರನೇ ದಿನ ಸೋಮವಾರ ರಾತ್ರಿ ನಡೆದ ಪೀಠಾರೋಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ಸಂಸ್ಕೃತ ಎಂದರೆ ವಚನ ಸಾಹಿತ್ಯ. ಆದ್ದರಿಂದ ನಾವೆಲ್ಲರೂ ವಚನ ಸಾಹಿತ್ಯ ಅಧ್ಯಯನ ಮಾಡಬೇಕು. ಹಿಂದು ದೇವತೆಗಳ ಕೈಯಲ್ಲಿ ಆಯುಧಗಳಿವೆ. ಆದರೆ, ಬಸವಣ್ಣ ಹಾಗೂ ವಚನಕಾರರ ಕೈಯಲ್ಲಿ ಇಂತಹ ಆಯುಧಗಳಿಲ್ಲ. ಇದು ಲಿಂಗಾಯತ ಧರ್ಮದ ಮಹತ್ವ ತಿಳಿಸುವುದು ಎಂದು ಹೇಳಿದರು.

    ಬಸವ ಧರ್ಮದ ಮಹಾಜಗದ್ಗುರು ಪೀಠದ 28ನೇ ಪೀಠಾರೋಹಣ ಮಾಡಿ ಕೂಡಲಸಂಗಮ ಬಸವ ಧರ್ಮ ಪೀಠದ ಜಗದ್ಗುರು ಮಾತೆ ಗಂಗಾದೇವಿ ಮಾತನಾಡಿ, ಮಾತಾಜಿಯ ಸಂಕಲ್ಪದಂತೆ ನಾವು ಮುನ್ನಡೆಯುತ್ತಿದ್ದೇವೆ ಎಂದರು.

    ಹಾವೇರಿ ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ರಾಜಣ್ಣ ವೈದ್ಯ ಉದ್ಘಾಟಿಸಿದರು. ತೆಲಂಗಾಣ ರಾಜ್ಯದ ಜಹಿರಾಬಾದ್ ಮಲ್ಲಯ್ಯನಗಿರಿಯ ಬಸವಲಿಂಗ ಅವಧೂತರು, ಮುಂಬೈ ಉದ್ಯಮಿ ಆರ್.ಬಿ. ಹೆಬ್ಬಳ್ಳಿ ಹಾಗೂ ಬಸವ ಧರ್ಮ ಪೀಠದ ಜಂಗಮೂರ್ತಿಗಳು ಮುಂತಾದವರು ಇದ್ದರು. ಅಪಾರ ಭಕ್ತರು ಆಗಮಿಸಿದ ಹಿನ್ನೆಲೆ ರಾತ್ರಿ 1 ಗಂಟೆಯವರೆಗೂ ಪೀಠಾರೋಹಣ ಸಮಾರಂಭ ವೀಕ್ಷಣೆ ಜರುಗಿತು.

    ಮಾತಾಜಿಯ ಇಚ್ಛಾಶಕ್ತಿಯ ಲವಾಗಿ ಸದ್ಯ ಬಸವ ಧರ್ಮ ಪೀಠದಲ್ಲಿ 33 ಜಂಗಮ ಮೂರ್ತಿಗಳು ಇದ್ದಾರೆ. ಮಾತಾಜಿಯ ಕನಸು ಈಡೇರಿಸಲು ಎಲ್ಲರೂ ನಿಷ್ಠೆಯಿಂದ ದುಡಿಯೋಣ.
    – ಮಾಹಾದೇಶ್ವರ ಸ್ವಾಮೀಜಿ ಬಸವ ಧರ್ಮ ಪೀಠದ ಉತ್ತರಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts