More

    ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ

    ಕೂಡಲಸಂಗಮ: ಕೂಡಲಸಂಗಮ ಬಸವ ಧರ್ಮ ಪೀಠದ ಮಹಾಮನೆಯ ಆವರಣದಲ್ಲಿ ನಡೆದ 33ನೇ ಶರಣಮೇಳದ ಕೊನೆಯ ದಿನ ಮಂಗಳವಾರ ಲಿಂಗಾಯತ ಧರ್ಮ ಸಂಸ್ಥಾಪನಾ ದಿನ ಆಚರಿಸಲಾಯಿತು.

    ಶರಣಮೇಳಕ್ಕೆ ಆಗಮಿಸಿದ್ದ ಶರಣ, ಶರಣೆಯರು ಬೆಳಗ್ಗೆ ಸ್ನಾನ, ಇಷ್ಟಲಿಂಗಾರ್ಚನೆ, ಬಸವಾರ್ಚನೆ ಪೂರೈಸಿ, ಗಣಲಿಂಗ ದರ್ಶನ ಮತ್ತು ಸ್ಪರ್ಶ, ಧ್ವಜಾರೋಹಣ ಮತ್ತು ಗುರುವಂದನೆ, ಸಮುದಾಯ ಪ್ರಾರ್ಥನೆ, ಕುಸುರೆಳ್ಳು ವಿನಿಮಯ, ವಚನ ಪಠಣ, ಬಸವ ಐಕ್ಯ ಮಂಟಪದ ದರ್ಶನ, ಪಥ ಸಂಚಲನ, ಮೆರವಣಿಗೆ, ಸಾಮೂಹಿಕ ಇಷ್ಟಲಿಂಗಾರ್ಚನೆ ವಿಧಿಗಳಲ್ಲಿ ಭಾಗವಹಿಸಿದರು.

    ಮಹಾಮನೆಯ ಮುಂಭಾಗದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆಯ ಧ್ವಜಾರೋಹಣವನ್ನು ಕೂಡಲಸಂಗಮ ಬಸವ ಧರ್ಮ ಪೀಠದ ಮಾಹಾದೇಶ್ವರ ಸ್ವಾಮೀಜಿ ನೆರವೇರಿಸಿದರು. ಧ್ವಜಾರೋಹಣದಲ್ಲಿ ಮಾತೆ ಗಂಗಾದೇವಿ, ಚನ್ನಬಸವಾನಂದ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ದಾನೇಶ್ವರಿ, ಬಸವಕುಮಾರ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಮಾತೆ ಬಸವರತ್ನಾ, ಮಾತೆ ಸತ್ಯಾದೇವಿ ಮುಂತಾದವರು ಇದ್ದರು. ಧ್ವಜಾರೋಹಣ ನಂತರ ಗುರುವಂದನಾ ಕಾರ್ಯಕ್ರಮ ನಡೆಯಿತು.

    ಮಕರ ಸಂಕ್ರಾಂತಿ ಆಚರಣೆ
    ಬಾದಾಮಿಯ ಬನಶಂಕರಿ, ಸವದತ್ತಿಯ ಯಲಮ್ಮನ ಜಾತ್ರೆ ಹಾಗೂ ಶರಣಮೇಳಕ್ಕೆ ಆಗಮಿಸಿದ್ದ ಭಕ್ತರು ಮಂಗಳವಾರ ಬೆಳ್ಳಗ್ಗೆ ಮಕರ ಸಂಕ್ರಾಂತಿ ಆಚರಿಸಿದರು. ಬೆಳಗ್ಗೆ 5 ಗಂಟೆಯಿಂದಲೇ ದೇವಾಲಯ ಆವರಣದ ನದಿ ದಡದಲ್ಲಿ ಭಕ್ತರು ಸ್ನಾನಕ್ಕೆ ಆಗಮಿಸಿದ್ದರು.

    ಎಲ್‌ಇಡಿ ಮೂಲಕ ಐಕ್ಯ ಮಂಟಪ ವೀಕ್ಷಣೆ
    ಬಸವಣ್ಣನ ಐಕ್ಯಸ್ಥಳದ ಐಕ್ಯ ಮಂಟಪದ ದುರಸ್ತಿ ಕಾರ್ಯ ನಡೆದ ನಿಮಿತ್ತ ಶರಣ ಮೇಳಕ್ಕೆ ಆಗಮಿಸಿದ ಭಕ್ತರು ಐಕ್ಯ ಮಂಟಪದ ಮುಂಭಾಗದಲ್ಲಿ ಹಾಕಿದ ಎಲ್‌ಇಡಿ ಪರದೆ ಮೂಲಕ ಐಕ್ಯ ಮಂಟಪದ ದೃಶ್ಯಾವಳಿಯನ್ನು ನೋಡಿ ಸಂಭ್ರಮಿಸಿದರು. ಬೆಳಗ್ಗೆ 5 ಗಂಟೆಯಿಂದಲೇ ದೇವಾಲಯ ಆವರಣದಲ್ಲಿ ಭಕ್ತರು ಇಷ್ಟಲಿಂಗ ಪೂಜೆ ಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts