ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳ ತಪಾಸಣೆ

ಕೊಂಡ್ಲಹಳ್ಳಿ: ಸಾಮಾಜಿಕ ಪರಿಶೋಧನ ತಂಡದವರು ಮನೆಗೆ ಬಂದಾಗ ಫಲಾನುಭವಿಗಳು ಸರಿಯಾದ ಮಾಹಿತಿ ನೀಡಬೇಕೆಂದು ತಾಲೂಕು ಸಾಮಾಜಿಕ ಪರಿಶೋಧಕ ಟಿ.ಮಲ್ಲಪ್ಪ ತಿಳಿಸಿದರು.

ಸಮೀಪದ ಮೊಗಲಹಳ್ಳಿಯಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯ ಅರ್ಹ ಫಲಾನುಭವಿಗಳ ತಪಾಸಣೆ ವೇಳೆ ಮಾತನಾಡಿದರು.

ತಪಾಸಣೆ ವೇಳೆ ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ, ವಿಧವಾ ವೇತನ, ಮೈತ್ರಿ ಸೇರಿದಂತೆ ಇತರ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯ ಅರ್ಹ, ನಕಲಿ ಫಲಾನುಭವಿಗಳ ಗುರುತಿಸುವಿಕೆ ಹಾಗೂ ನಿಧನರಾದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಕಾರ್ಯ ಜೂನ್ 1 ರಿಂದ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ದೇವಸಮುದ್ರ, ಹಿರೇಕೆರೆಹಳ್ಳಿ, ಕೋನಸಾಗರ, ನಾಗಸಮುದ್ರ, ರಾಂಪುರ, ಸಂತೇಗುಡ್ಡ ಪಂಚಾಯಿತಿ ಸೇರಿದಂತೆ ಒಟ್ಟು 8 ಗ್ರಾಪಂ ಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಪಂ ಸಂಪನ್ಮೂಲ ವ್ಯಕ್ತಿ ಅಬೂಬ್ಕರ್, ಮೊಗಲಹಳ್ಳಿ ಗ್ರಾಮ ಸಹಾಯಕ ನಾಗರಾಜ್ ಇತರರಿದ್ದರು.

Leave a Reply

Your email address will not be published. Required fields are marked *