More

    ಕೊಂಡಾಲಮ್ಮ ಜಾತ್ರೆಗೆ ಚಾಲನೆ

    ಕೊಂಡ್ಲಹಳ್ಳಿ: ಗ್ರಾಮ ದೇವತೆ ಕೊಂಡಾಲಮ್ಮದೇವಿ ಜಾತ್ರಾ ಮಹೋತ್ಸವವು ಜ.21ರಿಂದ ಮೂರು ದಿನಗಳ ಕಾಲ ಜರುಗಲಿದೆ.

    21ರ ಸಂಜೆ 5ಕ್ಕೆ ಭಕ್ತರಿಂದ ಹೂವಿನಹಾರ ತರುವುದು, ರಾತ್ರಿ 8ಕ್ಕೆ ಭಜನೆ, 22ರ ಬೆಳಗ್ಗೆ ಅನ್ನಸಂತರ್ಪಣೆ, 23ರ ಮಧ್ಯಾಹ್ನ 3ಕ್ಕೆ ದೇವಿಯ ಮೆರವಣಿಗೆ ನಡೆಯಲಿದೆ ಎಂದು ಕೊಂಡಾಲಮ್ಮದೇವಿ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

    ಊರಿನ ಹಿನ್ನೆಲೆ: ಒಂದು ಸ್ಥಳಕ್ಕೆ ಹೆಸರು ಬರಲು ಅಲ್ಲಿನ ಐತಿಹ್ಯ ಅಥವಾ ನೆಲೆಸಿದ ದೇವರು ಕಾರಣವಾಗಿರುತ್ತದೆ. ಇಂತಹದ್ದೇ ಒಂದು ಹಿನ್ನೆಲೆ ಕೊಂಡ್ಲಹಳ್ಳಿಗೂ ಇದೆ. ಗ್ರಾಮವು ಈ ಮೊದಲು ಮಾರಮ್ಮನಹಳ್ಳಿ ರಸ್ತೆಯ ಕಡೆಯ ಹಳ್ಳದ ದಂಡೆ ಸಮೀಪವಿತ್ತು. ಅಲ್ಲದೆ ಈ ಸ್ಥಳ ಎರಡು ಶತಮಾನಗಳ ಹಿಂದೆ ಕೊಂಡಾಲಮ್ಮದೇವಿಯ ನೆಲೆಯಾಗಿತ್ತು. ಈ ಹಿನ್ನೆಲೆಯಿಂದಲೇ ಗ್ರಾಮಕ್ಕೆ ಕೊಂಡ್ಲಹಳ್ಳಿ ಎಂಬ ಹೆಸರು ಬಂದಿದೆ ಎಂದು ಊರಿನ ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.

    ಕಳೆದ ಕೆಲವು ವರ್ಷಗಳಿಂದ ದೇವಿಯ ನೆಲೆಯ ಮೂಲಸ್ಥಳದಲ್ಲಿಯೇ ಭಕ್ತರು ದೇವಿಗೊಂದು ಬಂಡೆಯ ಗುಡಿಕಟ್ಟಿ ಪೂಜೆ ಸಲ್ಲಿಸಲಾರಂಭಿಸಿದರು. ಈಗಲೂ ಧಾರ್ಮಿಕ ಕ್ರಿಯೆ ಮುಂದುವರಿದಿದ್ದು, ಪ್ರತಿ ವರ್ಷವೂ ಗ್ರಾಮಸ್ಥರೆಲ್ಲ ಸೇರಿ ದೇವಿ ಜಾತ್ರೆ ಸಹ ಮಾಡುತ್ತಿದ್ದಾರೆ. ಗ್ರಾಮದ ಭಕ್ತರೊಬ್ಬರು ಅರ್ಧ ಎಕರೆ ನಿವೇಶನವನ್ನು ದಾನ ನೀಡಿದ್ದು, ಸುಸಜ್ಜಿತ ಗುಡಿ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಮುಖಂಡ ಬಿ.ಟಿ. ಮಂಜುನಾಥ್ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts