ಪಕ್ಷಿಗಳಿಗೆ ಗೂಡು, ನೀರು, ಆಹಾರ

ಕೊಂಡ್ಲಹಳ್ಳಿ: ಗ್ರಾಮದ ರೈತ ಮಹಿಳೆಯೊಬ್ಬರು ಪಕ್ಷಿಗಳಿಗೆ ನೀರು, ನೆರಳಿನ ವ್ಯವಸ್ಥೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ಪ್ರಗತಿಪರ ರೈತರಾದ ವಿಜಯಲಕ್ಷ್ಮಿ ಶಿವಕುಮಾರ್, ಗ್ರಾಮದ ಮಾರಮ್ಮನಹಳ್ಳಿ ರಸ್ತೆಯ ತೋಟದ ಮನೆಯ ತಾರಸಿಯ ಶೀಟ್‌ಗೆ ಹೊಂದಿಕೊಂಡಂತಿರುವ ಚಾವಣಿ ಕೆಳಗಿನ ಆಂಗ್ಲರ್ ಮಧ್ಯದಲ್ಲಿ ಪಕ್ಷಿಗಳಿಗೆ ಗೂಡು ಕಟ್ಟಿಕೊಳ್ಳಲು ಬಾಕ್ಸ್‌ಗಳನ್ನಿಟ್ಟಿದ್ದಾರೆ.

ಇದರಲ್ಲಿ ಮೈನಾ, ಗೊರವಂಕ ಸೇರಿ ವಿವಿಧ ಪಕ್ಷಿಗಳು ತಮಗಿಷ್ಟದಂತೆ ರಟ್ಟಿನ ಪೆಟ್ಟಿಗೆಯಲ್ಲಿ ಗೂಡು ನಿರ್ಮಿಸಿಕೊಂಡು ಜೀವಿಸುತ್ತಿವೆ. ಇವುಗಳ ಆಹಾರಕ್ಕಾಗಿ ದಿನಕ್ಕೆ ಎರಡು ಬಾರಿ ಮನೆ ಅಂಗಳದಲ್ಲಿ ಕಾಳುಗಳನ್ನು ಹಾಕಲಾಗುತ್ತಿದ್ದು, ಸಣ್ಣ ಮತ್ತು ದೊಡ್ಡ ಬಕೆಟ್‌ಗಳಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published. Required fields are marked *