ಮಳೆಗೆ ಟೊಮ್ಯಾಟೊ ಬೆಳೆ ಹಾಳು

ಕೊಂಡ್ಲಹಳ್ಳಿ: ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಗುಡುಗು ಸಿಡಿಲು ಸಹಿತ ಮಳೆಗೆ ಹೋಬಳಿಯ ಹಲವೆಡೆ ಮರಗಿಡಗಳು ನೆಲಕಚ್ಚಿದ್ದು ಕೆಲ ಮನೆಗಳು ಕುಸಿದು ಬಿದ್ದಿವೆ.

ಹನುಮಂತನಹಳ್ಳಿ ಹೊರವಲಯದ ಜಯರಾಮಪ್ಪ ಹಾಗೂ ಚನ್ನವೀರಪ್ಪ ಅವರ ಮನೆಗಳ ಚಾವಣಿ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ. ತಾಪಂ ಸದಸ್ಯ ಈ.ರಾಮರೆಡ್ಡಿ ಅವರ 4 ಎಕರೆ ಟೊಮ್ಯಾಟೊ ಬೆಳೆ ನೆಲಕಚ್ಚಿದ್ದು, ಬೆಳೆಗೆ ನೆರಳಿನ ವ್ಯವಸ್ಥೆ ಮಾಡಿದ ಹೊದಿಕೆಗಳು ನೆಲಕ್ಕುರುಳಿವೆ.

ಹೂವು ಗಿಡಗಳು ಸಂಪೂರ್ಣ ಹಾಳಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕೊಂಡ್ಲಹಳ್ಳಿ-ಹನುಮಂತನಹಳ್ಳಿ ಸಂಪರ್ಕ ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆ ನೆಟ್ಟಿದ್ದ ಸಾಲು ಗಿಡಗಳು ನೆಲಕ್ಕುರುಳಿವೆ. ಕೋನಸಾಗರದ ಹಳ್ಳದಲ್ಲಿ ಸ್ವಲ್ಪಮಟ್ಟಿಗೆ ನೀರು ಬಂದಿದೆ.

Leave a Reply

Your email address will not be published. Required fields are marked *