ಈರಣ್ಣಸ್ವಾಮಿ ಸನ್ನಿಧಿಯಲ್ಲಿ ಅನ್ನಸಂತರ್ಪಣೆ

ಕೊಂಡ್ಲಹಳ್ಳಿ: ಈರಣ್ಣಮರ ಕ್ಷೇತ್ರದಲ್ಲಿನ ಈರಣ್ಣಸ್ವಾಮಿ ಸನ್ನಿಧಿಯಲ್ಲಿ ಭಾನುವಾರ ವಿಶೇಷ ಪೂಜೆ ಜರುಗಿತು.

ಇಲ್ಲಿನ ಗೋಶಾಲೆಯ ರಾಸುಗಳ ಪಾಲಕರು, ಸ್ವಾಮಿಯ ಸನ್ನಿಧಿಯನ್ನು ತಳಿರುತೋರಣಗಳಿಂದ ಅಲಂಕರಿಸಿ ಉತ್ತಮ ಮಳೆ ಬೆಳೆಗೆ ಪ್ರಾರ್ಥಿಸಿದರು.

ಗೋಶಾಲೆಯ ರಾಸುಗಳ ಪಾಲಕರು, ರೈತರು ಸಂಗ್ರಹದ ಧನಸಂಗ್ರಹದ ಮೊತ್ತದ ನೆರವಿನಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕೋನಸಾಗರ, ಮಾರಮ್ಮನಹಳ್ಳಿ, ನೇರ‌್ಲಹಳ್ಳಿ, ನೇತ್ರನಹಳ್ಳಿ ಸೇರಿ ವಿವಿಧೆಡೆಯಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *