ಹಾಳಾದ ರಸ್ತೆಗೆ ಮುಕ್ತಿ ಕೊಡಿ..

ಕೊಂಡ್ಲಹಳ್ಳಿ: ಇಲ್ಲಿನ ಗಾಂಧಿ ವೃತ್ತದಿಂದ ಹನುಮಂತನಹಳ್ಳಿ ಮೂಲಕ ಗೌರಸಮುದ್ರ ಸಂಪರ್ಕಿಸುವ ರಸ್ತೆ ಹಾಳಾಗಿ ವರ್ಷಗಳೇ ಕಳೆದಿವೆ.

ಡಾಂಬರೀಕರಣಗೊಂಡು ಎರಡು ದಶಕ ಕಳೆದ ಈ ರಸ್ತೆಯಲ್ಲೀಗ ಡಾಂಬರಿನ ಕಲ್ಲುಗಳು ಕಿತ್ತುಹೋಗಿವೆ. ಸದಾ ಧೂಳುಮಯವಾಗಿದೆ. ಅಲ್ಪ ಸ್ವಲ್ಪ ಮಳೆಯಾದರೂ ಕೆಸರು ಗದ್ದೆಯಾಗಿ, ಗುಂಡಿಗಳೆ ನಿರ್ಮಾಣವಾಗಿ ಪಾದಚಾರಿಗಳು, ವಾಹನ ಸವಾರರು ಸಂಚರಿಸುವುದೇ ಕಷ್ಟವಾಗಲಿದೆ.

ರಸ್ತೆಯ ಧೂಳಿನಿಂದಾಗಿ ನೆರೆಹೊರೆಯ ಮನೆಗಳವರು ಬಾಗಿಲು ತೆರೆಯುವುದೇ ಕಷ್ಟವಾಗಿದೆ. ಈ ಮುಖ್ಯ ರಸ್ತೆ ಬಗ್ಗೆ ಈಗಲಾದರೂ ಗಮನ ಹರಿಸಬೇಕು. ಇದನ್ನು ಸಿಸಿ ರಸ್ತೆಯನ್ನಾಗಿಸಲು ಪಿಡಬ್ಲ್ಯುಡಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಆಸಕ್ತಿ ವಹಿಸಬೇಕೆಂದು ಗ್ರಾಮಸ್ಥರಾದ ಜಿ.ಬಿ.ಪ್ರಕಾಶ್, ಎಂ.ರವಿ, ತಿಪ್ಪೇಶ್ ಒತ್ತಾಯಿಸಿದ್ದಾರೆ.

ಕೊಂಡ್ಲಹಳ್ಳಿ ವೃತ್ತದಿಂದ ಚಳ್ಳಕೆರೆ ತಾಲೂಕು ಗಡಿವರೆಗೆ ಅಂದಾಜು 1.3 ಕಿ.ಮೀ. ಉದ್ದ ರಸ್ತೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ವೃತ್ತದಿಂದ ಊರ ಹೊರಗಿನವರೆಗೆ ಸಿಸಿ ರಸ್ತೆ, ಅಲ್ಲಿಂದ ತಾಲೂಕು ಗಡಿಯವರೆಗೆ ಡಾಂಬರ್ ರಸ್ತೆಯನ್ನು ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಟೆಂಡರ್ ಕರೆದಿದ್ದು, ಎರಡು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಪಿಡಬ್ಲ್ಯುಡಿ ಎಇಇ ಬಸವನಗೌಡರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *