More

  ವಿದ್ಯಾರ್ಥಿಗಳಿಗೆ ಪರಿಸರ ಪ್ರಜ್ಞೆಮೂಡಿಸುವ ಕೆಲಸ ನಡೆಯಬೇಕು: ಅಶೋಕ್ ರೈ

  ಪುತ್ತೂರು: ವಿದ್ಯಾರ್ಥಿಗಳಿಗೆ ಪರಸರದ ಬಗ್ಗೆ ಪ್ರಜ್ಞೆ ಮೂಡಿಸುವ ಕೆಲಸವನ್ನು ಶಿಕ್ಷಕರು ಮತ್ತು ಅರಣ್ಯ ಇಲಾಖೆ ಮಾಡಬೇಕು ಆ ಮೂಲಕ ಅವರಿಗೆ ಪರಿಸರ, ಗಿಡ ಮರದ ಬಗ್ಗೆ ಪ್ರೀತಿ ಮೂಡುವಂತೆ ಮಾಡಬೇಕು. ಮರಗಳನ್ನು ಬೆಳೆಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಮಗೆ ಇಲ್ಲಿ ಉಸಿರಾಡಲು ಸಾಧ್ಯವಿಲ್ಲದಂತ ವಾತಾವರಣ ಸೃಷ್ಟಿಯಾಗಬಹುದು. ಪ್ರತೀಯೊಬ್ಬ ವಿದ್ಯಾರ್ಥಿ ತನ್ನ ಮನೆಯಲ್ಲಿ ಅಥವಾ ತನ್ನ ಊರಿನ ಪರಿಸರದಲ್ಲಿ ಗಿಡವನ್ನು ನೆಟ್ಟು ಪೋಷಿಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

  ಅವರು ಕೊಂಬೆಟ್ಟು ಪ ಪೂ ಕಾಲೇಜಿನ ವಠಾರದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಪುತ್ತೂರು ಮತ್ತು ಸರಕಾರಿ ಪ ಪೂ ಕಾಲೇಜು ಕೊಂಬೆಟ್ಟು ಇದರ ವತಿಯಿಂದ ನಡೆದ ಸಸ್ಯ ಶ್ಯಾಮಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

  ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆ ವಿದ್ಯಾರ್ಥಿಗಳಿಗೆ ಉತ್ತೇಜವನ್ನು ನೀಡಬೇಕು. ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಪುತ್ತೂರು ತಾಲೂಕಿನಾದ್ಯಂತ ಸಸ್ಯ ಶ್ಯಾಮಲ ಯೋಜನೆಯಡಿ ೫೦೦೦ ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಂಡಿದ್ದು ಇದು ಉತ್ತಮ ಬೆಳವಣಿಗೆಯಾಗಿದೆ, ಎಲ್ಲೆಲ್ಲಿ ಖಾಲಿ ಜಾಗ ಇದೆಯೋ ಅಲ್ಲೆಲ್ಲಾ ಗಿಡಗಳನ್ನು ನೆಡುವ ಕೆಲಸ ನಡೆಯಬೇಕು ಇದಕ್ಕೆ ನನ್ನ ಸಂಪೂರ್ಣ ಪ್ರೋತ್ಸಾಹ ಇದೆ ಎಂದು ಹೇಳಿದರು.

  ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್., ಪುತ್ತೂರು ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಪ್ರಾಂಶುಪಾಲರಾದ ಗೋಪಾಲಕೃಷ್ಣ ಗೌಡ,ದ ಕ ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ಯಾಮಲ ಎಂ, ರಾಷ್ಟ್ರೀಯ ಪ್ರಶಶ್ತಿ ವಇಜೇತ ಶಿಕ್ಷಕರಾದ ಕೋಟಿಯಪ್ಪ ಪೂಜಾರಿ, ಸೇರ, ಶಾಲಾ ಎಸ್‌ಡಿಎಂಸಿ ಕಾಯಾಧ್ಯಕ್ಷ ಜೋಫಕಿಂ ಡಿಸೋಜಾ, ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಪ್ರಸಾದ್ ಕೌಶಲ್ ಶೆಟ್ಟಿ, ಕಡಬ ತಾಲೂಕು ಸಹಸಿಕ್ಷಕರ ಸಂಘದ ಕೋಶಾಧಿಕಾರಿ ಶ್ರೀಲತಾ ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ವಸಂತ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts