ಕೊಳ್ಳೇಗಾಲ: ಹರಳೆ ಗ್ರಾಮದ ಸಮೀಪ ಮಂಗಳವಾರ ಕಾವೇರಿ ನದಿ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತ್ತದೇಹ ಪತ್ತೆಯಾಗಿದೆ.
ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದ ಪುಟ್ಟ ಅರಸಶೆಟ್ಟಿ(65) ಮೃತ. ಆ.24 ರಂದು ಹೆಂಡತಿಯೊಂದಿಗೆ ಮುನಿಸಿಕೊಂಡು ಮನೆಯಿಂದ ಹೊರ ಬಂದಿದ್ದರು. ಈತನನ್ನು ಎಲ್ಲ ಕಡೆ ಹುಡುಕಾಡಿದ ಸಂಬಂಧಿಕರು, ಯಳಂದೂರು ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು. ಆದರೀಗ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದ ಕಾವೇರಿ ನದಿ ತೀರದಲ್ಲಿ ಮೃತ ದೇಹವನ್ನು ಪರಿಶೀಲಿಸಲಾಗಿ ಉಪ್ಪಿನ ಮೋಳೆ ಗ್ರಾಮದ ಪುಟ್ಟ ಅರಸಶೆಟ್ಟಿ ಎಂಬುದು ತಿಳಿದು ಬಂದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ. ಕೊಳ್ಳೇಗಾಲ ಸರ್ಕಾರಿ ಉಪವಿಭಾಗದ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ.
TAGGED:Kollegala news