More

    ಬಾಕಿ ಹಣ ನೀಡಲು ಒತ್ತಾಯ

    ಕೊಳ್ಳೇಗಾಲ: ತಾಲೂಕಿನ ಹರಳೆ ಗ್ರಾಮ ಪಂಚಾಯತಿ ಕಚೇರಿ ಮುಂಭಾಗ ಸೋಮವಾರ 20ಕ್ಕೂ ಹೆಚ್ಚು ನರೇಗಾ ಮಹಿಳಾ ಕಾರ್ಮಿಕರು ಬಾಕಿ ಉಳಿಸಿಕೊಂಡಿರುವ ಕೂಲಿ ಹಣ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

    ಗ್ರಾಪಂ ಕಚೇರಿ ಮುಂದೆ ಜಮಾಯಿಸಿದ್ದ ಮಹಿಳಾ ಕಾರ್ಮಿಕರು, ಹರಳೆ ಗ್ರಾಪಂನಲ್ಲಿ 10 ದಿನ ಕೂಲಿ ಮಾಡಿದ್ದು, ಕೇವಲ 6 ದಿನಗಳ ಕೂಲಿ ಮಾತ್ರ ಬಂದಿದೆ. ಇನ್ನು ನಾಲ್ಕು ದಿನಗಳ ಹಣ ಬಂದಿಲ್ಲ ಎಂದು ಪ್ರತಿಭಟಿಸಿದರು. ಮಹಿಳಾ ಕೂಲಿ ಕಾರ್ಮಿಕರಾದ ರಾಣಿ ಮಾತನಾಡಿ, ಬಾಕಿ ಹಣ ಏಕೆ ಬಂದಿಲ್ಲ ಎಂದರೆ ನೀವು ಮತ್ತೆ ಫೋಟೋ ಹಾಗೂ ಬೆರಳಚ್ಚು ನೀಡಬೇಕು ಎಂದು ಪಿಡಿಒ ರಾಜಮಣಿ ಹೇಳುತ್ತಿದ್ದಾರೆ. ಈಗಾಗಲೇ ನಾವು ಫೋಟೋ ಹಾಗೂ ಬೆರಳಚ್ಚು ನೀಡಿದ್ದೇವೆ. ಒಂದು ವೇಳೆ ಬೆರಳಚ್ಚು ನೀಡದಿದ್ದರೆ ನಿಮಗೆ ಹಣ ಬರುವುದಿಲ್ಲ, ಎಲ್ಲಿಗೆ ಬೇಕಾದರೂ ದೂರು ನೀಡಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ಬಕ್ರೀದ್ ಹಿನ್ನೆಲೆಯಲ್ಲಿ ಗ್ರಾಪಂ ಕಚೇರಿಗೆ ರಜೆ ಇದ್ದ ಕಾರಣ ಫೋನ್ ಮೂಲಕ ಮೇಲಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಅಳಲು ತೋಡಿಕೊಂಡ ಮಹಿಳೆಯರು, ಮಂಗಳವಾರ ನಮಗೆ ಕೂಲಿ ಹಣ ನೀಡದಿದ್ದರೆ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿ ಪ್ರತಿಭಟನೆ ಕೈಬಿಟ್ಟರು. ಈ ಬಗ್ಗೆ ‘ವಿಜಯವಾಣಿ’ಗೆ ತಾಲೂಕು ಪಂಚಾಯಿತಿ ಇಒ ಶ್ರೀನಿವಾಸ್ ಪ್ರತಿಕ್ರಿಯಿಸಿ, ಕೂಲಿ ಕಾರ್ಮಿಕರ ಸಮಸ್ಯೆ ಪರಿಶೀಲಿಸಿ ಬಾಕಿ ಉಳಿದ ಹಣ ಬರುವಂತೆ ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಮಾನಸಾ, ಪುಟ್ಟಸಿದ್ದಮ್ಮ, ಚಂದ್ರಮ್ಮ, ಮಹದೇವಮ್ಮ, ಚೌಡಮ್ಮ, ರತ್ನಮ್ಮ, ಭಾಗ್ಯಮ್ಮ, ಸುಂದರಮ್ಮ, ಚಂದ್ರಕ0್ಕ, ರಾಜಮ್ಮ , ಶಿವಮ್ಮ, ಗೌರಮ್ಮ, ಗವಿಸಿದ್ದಮ್ಮ, ಪ್ರಿಯಾ ಇತರರು ಇದ್ದರು.

    See also  ಹಲವು ರಾಜ ಮನೆತನಗಳ ಆಳ್ವಿಕೆಗೆ ಸಾಕ್ಷಿಯಾದ ಮಳೂರುಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts