ಹೈ ಕಾನಿಕ್ ಕ್ರಿಕೆಟರ್ ಸತ್ತೇಗಾಲ ತಂಡ ಪ್ರಥಮ

1 Min Read
ಹೈ ಕಾನಿಕ್ ಕ್ರಿಕೆಟರ್ ಸತ್ತೇಗಾಲ ತಂಡ ಪ್ರಥಮ

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಗ್ರಾಮದಲ್ಲಿ ಜೈ ಭೀಮ್ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ಜೈ ಭೀಮ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಹೈ ಕಾನಿಕ್ ಕ್ರಿಕೆಟರ್ ಸತ್ತೇಗಾಲ ತಂಡ ಪ್ರಥಮ ಬಹುಮಾನ ಪಡೆದುಕೊಂಡಿದೆ.

ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರು ಭಾನುವಾರ ವಿಜೇತ ತಂಡಕ್ಕೆ ಬಹುಮಾನ ವಿತರಣೆ ಮಾಡಿದರು. ಜೈ ಭೀಮ್ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ ಅಂತರ್ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಭಾಗವಹಿಸುವ ಮನೋಭಾವ ನಮ್ಮನ್ನು ಸಾಧಕರನ್ನಾಗಿ ಮಾಡುತ್ತದೆ. ಇದೇ ರೀತಿ ಪಂದ್ಯಾವಳಿಯನ್ನು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಮಾಡೋಣ. ಇಲ್ಲಿನ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ಆಟವಾಡಲು ಇಚ್ಛಿಸಿದವರಿಗೆ ಪ್ರೋತ್ಸಾಹ ನೀಡುತ್ತೇನೆ ಎಂದು ಭರವಸೆ ನೀಡಿದರು.

ವಿವಿಧ ಜಿಲ್ಲೆಗಳಿಂದ 24 ತಂಡಗಳು ಭಾಗವಹಿಸಿದ್ದು, ಹೈ ಕಾನಿಕ್ ಕ್ರಿಕೆಟರ್ ಸತ್ತೇಗಾಲ ತಂಡ ಪ್ರಥಮ, ಮಾರ್ಟಳ್ಳಿಯ ಗೋಟ್ ಕಿರಾಪತಿ ಕ್ರಿಕೆಟರ್ಸ್ ತಂಡ ದ್ವಿತೀಯ ಪಡೆದುಕೊಂಡಿದೆ. ಪ್ರಥಮ ಸ್ಥಾನ ಪಡೆದವರೆಗೆ ಆಕರ್ಷಕ ಟ್ರೋಫಿ, 20 ಸಾವಿರ ರೂ. ನಗದು, ದ್ವಿತೀಯ ಸ್ಥಾನ ಪಡೆದವರಿಗೆ 10 ಸಾವಿರ ನಗದು, ಆಕರ್ಷಕ ಟ್ರೋಫಿ ನೀಡಲಾಯಿತು.

ಸತ್ತೇಗಾಲ ಗ್ರಾಮ ಅಧ್ಯಕ್ಷ ಕೆಂಪರಾಜು, ಮಾಜಿ ಉಪಾಧ್ಯಕ್ಷ ಪ್ರಭುಸ್ವಾಮಿ, ತಾಪಂ ಮಾಜಿ ಸದಸ್ಯ ಯಡಕುರಿಯ ಮಹಾದೇವು, ಪ್ರಥಮ ದರ್ಜೆ ಗುತ್ತಿಗೆದಾರ ಸಿದ್ದರಾಜು, ಸತ್ಯಾದ್ರಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಲಿಂಗರಾಜು, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲೇಶ್, ಮುಖಂಡರಾದ ವಿನು, ಪ್ರದೀಪ್, ಜಯಚಂದ್ರ, ಅವಿನಾಶ್ ಇದ್ದರು.

See also  ಭರಚುಕ್ಕಿ ಜಲಪಾತಕ್ಕೆ ಪ್ರವಾಸಿಗರ ಲಗ್ಗೆ
Share This Article