More

    ಯುವ ಶಕ್ತಿ ಸದ್ಬಳಕೆಯಾದರೆ ದೇಶ ಅಭಿವೃದ್ಧಿ

    ಕೊಳ್ಳೇಗಾಲ: ಯುವಶಕ್ತಿ ಸದ್ಬಳಕೆಯಾದಲ್ಲಿ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪಟ್ಟಣದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್.ಜೆ.ಕೃಷ್ಣ ಅಭಿಪ್ರಾಯಪಟ್ಟರು.
    ಪಟ್ಟಣದ ಗುರುಭವನದಲ್ಲಿ ಗುರುವಾರ ರಾಷ್ಟ್ರೀಯ ಯುವ ದಿನದ ಅಂಗವಾಗಿ ಆಯೋಜಿಸಿದ್ದ ಯುವಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
    ಹಿರಿಯರು ಯುವ ಜನರಿಗೆ ಅವರ ಜವಾಬ್ದಾರಿ ತಿಳಿಸಿಕೊಡುವ ಕೆಲಸ ಮಾಡುತ್ತಿಲ್ಲ. ಹೀಗಾಗಿ ಯುವಶಕ್ತಿಯ ಸದ್ಬಳಕೆ ಕ್ಷೀಣಿಸಿದೆ. ಯುವ ಜನರನ್ನು ದೇಶದ ಬೆಳವಣಿಗೆಗಾಗಿ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವಂತೆ ಮಾಡುವುದೇ ಯುವಜನ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದರು.
    ವಿವಿಧ ಯುವಕ ಸಂಘಗಳಿಗೆ ಅಪರ ಸಿವಿಲ್ ನ್ಯಾಯಾಧೀಶ ಸಂತೋಷ್ ಕೊಠಾರಿ ಅವರು ಕ್ರೀಡಾ ಪರಿಕರಗಳನ್ನು ವಿತರಿಸಿದರು. ‘ಯುವ ಜನ ಸಮಾವೇಶ ಮತ್ತು ಯುವಜನ ಸಬಲೀಕರಣ’ ಕುರಿತು ಮೈಸೂರು ಕ್ರೆಡಿಟ್ ಐ ಸಂಸ್ಥೆ ನಿರ್ದೇಶಕ ಡಾ.ಎಂ.ಪಿ.ವರ್ಷ ಅವರು ವಿಶೇಷ ಉಪನ್ಯಾಸ ನೀಡಿದರು.
    ಹಿರಿಯ ವಕೀಲ ಡಿ.ವೆಂಕಟಾಚಲ ಅವರು ‘ಕಾನೂನು ಸೇವೆ ಹಾಗೂ ವಿವಿಧ ಕಾನೂನು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಆರ್.ಪಿ.ನರೇಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ನಾಗೇಶ್, ವಕೀಲರ ಸಂಘದ ಕಾರ್ಯದರ್ಶಿ ಡಿ.ಕೆಂಪಯ್ಯ, ಗುರುಕುಲ ಐಟಿಐ ಶಿಕ್ಷಕ ಮಹಾದೇವಯ್ಯ, ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಕೆ.ಪುಟ್ಟರಸಶೆಟ್ಟಿ, ಟಿ.ಸಿ.ವೀರಭದ್ರಯ್ಯ, ಸಂಯೋಜಕರಾದ ಉಮಾ, ಚಂದ್ರಮ್ಮ, ನೆಹರು ಯುವ ಕೇಂದ್ರದ ದ್ರಾಕ್ಷಾಯಿಣಿ, ಶಿವಣ್ಣ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts