ಆದರ್ಶ ವಿದ್ಯಾಲಯ ಪ್ರವೇಶಾತಿ ಪರೀಕ್ಷೆ

ಕೊಳ್ಳೇಗಾಲ: ಪಟ್ಟಣದ ವಾಸವಿ ವಿದ್ಯಾಕೇಂದ್ರ, ಲಯನ್ಸ್ ಹಾಗೂ ನಿಸರ್ಗ ವಿದ್ಯಾನಿಕೇತನ ಶಾಲೆಯಲ್ಲಿ ಭಾನುವಾರ ಆದರ್ಶ ವಿದ್ಯಾಲಯ ಶಾಲೆಯ 6ನೇ ತರಗತಿಗೆ ಪ್ರವೇಶಾತಿ ಪರೀಕ್ಷೆ ನಡೆಯಿತು.
ಶಿಕ್ಷಣ ಇಲಾಖೆವತಿಯಿಂದ ಆಯೋಜಿಸಿದ್ದ ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕಿದ್ದ ವಿವಿಧ ಶಾಲೆಗಳ 785 ವಿದ್ಯಾರ್ಥಿಗಳ ಪೈಕಿ 56 ಮಕ್ಕಳು ಗೈರಾಗಿದ್ದರು. ಉಳಿದಂತೆ 729 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಈ ಮೂರು ಪರೀಕ್ಷಾ ಕೇಂದ್ರಗಳಲ್ಲಿ 33 ಶಿಕ್ಷಕರು ಸೇರಿದಂತೆ ಸಿಟ್ಟಿಂಗ್ ಸ್ಕೌಡ್ ಹಾಗೂ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ರಾಜ್ಯ ಮಟ್ಟದ ಶಿಕ್ಷಣ ಇಲಾಖೆ ಅಧಿಕಾರಿ ಪದ್ಮ ವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಯಳಂದೂರು : ಪಟ್ಟಣದಲ್ಲಿ ಭಾನುವಾರ 452 ವಿದ್ಯಾರ್ಥಿಗಳು ಸರ್ಕಾರಿ ಆದರ್ಶ ವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಜರುಗಿದವು. ಒಟ್ಟು 475 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 23 ವಿದ್ಯಾರ್ಥಿಗಳು ಗೈರಾಗಿದ್ದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಒಂದರಲ್ಲೇ ಅತಿ ಹೆಚ್ಚು 354 ವಿದ್ಯಾರ್ಥಿಗಳು ಪರೀಕ್ಷೆ ಬರೆದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ. ತಿರುಮಲಾಚಾರಿ ಮಾಹಿತಿ ನೀಡಿದರು.
ಯಳಂದೂರು ತಾಲೂಕಿನ ಮೆಳ್ಳಹಳ್ಳಿ ಗೇಟ್ ಬಳಿ ಇರುವ ಆದರ್ಶ ವಿದ್ಯಾಲಯದಲ್ಲಿ ಪ್ರಸ್ತುತ 80 ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶವಿದೆ.