PHOTO: ಫೊನಿ ಚಂಡಮಾರುತದಿಂದ ಆಗಬಹುದಾದ ಅನಾಹುತ ಎದುರಿಸಲು ಸಜ್ಜಾಗುತ್ತಿರುವ ಕೋಲ್ಕತ ನಗರ

ಕೋಲ್ಕತ: ಒಡಿಶಾ ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿರುವ ಫೊನಿ ಚಂಡಮಾರುತ ಕೆಲವೇ ಗಂಟೆಗಳಲ್ಲಿ ಕೋಲ್ಕತ ನಗರಕ್ಕೆ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಹವಾಮಾನ ಇಲಾಖೆ ಅಧಿಕಾರಿಗಳು ಚಂಡಮಾರುತದ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಫೊನಿ ಚಂಡಮಾರುತದಿಂದ ಆಗಬಹುದಾದ ಹಾನಿಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಾಗೂ ಪ್ರಾಣ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಕೋಲ್ಕತ ನಗರದ ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ಪಶ್ಚಿಮ ಬಂಗಾಳ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಚಂಡಮಾರುತ ಅಪ್ಪಳಿಸುವ ಮುನ್ನವೇ ಕೋಲ್ಕತದಲ್ಲಿ ಭಾರಿ ಮಳೆಯಾಗಲಾರಂಭಿಸಿದೆ. ಇದರ ನಡುವೆಯೇ ಜನರು ದೈನಂದಿನ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಭಾರಿ ಮಳೆಗಾಳಿಯ ನಡುವೆಯೇ ಗಂಗಾ ನದಿಯಲ್ಲಿ ಸಂಚರಿಸುವ ಫೆರಿಗಳು ಎಂದಿನಂತೆ ಸಂಚರಿಸುತ್ತಿವೆ. ಕಚೇರಿಗೆ ತೆರಳಲು ಫೆರಿಗಳನ್ನೇ ಆಶ್ರಯಿಸಿರುವ ಜನರು ಘಾಟ್​ನಲ್ಲಿ ನಿಂತು ಫೆರಿಗಳಿಗಾಗಿ ಮಳೆಯ ನಡುವೆಯೇ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. (ಏಜೆನ್ಸೀಸ್​)