ಹೆತ್ತ ತಾಯಿಗೆ ಬೆಂಕಿ ಹಚ್ಚಿದ 17 ವರ್ಷದ ಮಗ

ಕೋಲ್ಕತ: ತಾಯಿ ಮಗನ ಮಧ್ಯೆ ಜಗಳ ಉಂಟಾಗಿ ಕೋಪಗೊಂಡ 17 ವರ್ಷದ ಮಗ ತಾಯಿಗೆ ಬೆಂಕಿ ಹಚ್ಚಿರುವ ಘಟನೆ ನ್ಯೂ ಟೌನ್‌ ಪ್ರದೇಶದಲ್ಲಿ ನಡೆದಿದೆ.

ಜಗತ್‌ಪುರದ ನಿವಾಸಿಯಾಗಿರುವ ಸೋಮ ಮನ್ನಾ(40) ಎಂಬವರ ಮೇಲೆ ಆಕೆಯ ಪುತ್ರನೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಗೂ ಮುನ್ನ ಮಹಿಳೆ ಮತ್ತು ಪುತ್ರನ ನಡುವೆ ಜಗಳ ನಡೆದಿದೆ ಎಂದು ಸಂತ್ರಸ್ಥೆಯು ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯನ್ನು ನೆರೆಹೊರೆಯವರು ರಕ್ಷಿಸಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆರೋಪಿ ಬಾಲಕನನ್ನು ಬಾಲಾಪರಾಧಿ ನ್ಯಾಯ ಮಂಡಳಿ ಎದುರು ಹಾಜರುಪಡಿಸಲಾಗಿದೆ. (ಏಜೆನ್ಸೀಸ್)