ಕ್ಯಾಬ್​ ಬುಕ್​ ಮಾಡಿದ್ದ ಬೆಂಗಾಲಿ ನಟಿಯನ್ನು ಪಿಕ್​ ಅಪ್​ ಮಾಡಿದ ಚಾಲಕ ಮಾರ್ಗ ಮಧ್ಯೆ ಮಾಡಿದ್ದೇನು?

ಕೋಲ್ಕತಾ: ಶೂಟಿಂಗ್​ನಲ್ಲಿ​ ಪಾಲ್ಗೊಳ್ಳಲು ಕ್ಯಾಬ್​ ಮೂಲಕ ತೆರಳುತ್ತಿದ್ದ ವೇಳೆ ಕ್ಯಾಬ್​ನ ಚಾಲಕ ನನ್ನನ್ನು ಕಾರಿನಿಂದ ಹೊರಗೆಳೆದು ಬೆದರಿಕೆ ಹಾಕಿದ್ದಾನೆಂದು ಬೆಂಗಾಲಿ ನಟಿಯೊಬ್ಬಳು ಆರೋಪಿಸಿದ್ದು, ಕ್ಯಾಬ್​ ಚಾಲಕನನ್ನು ಕೋಲ್ಕತಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಪ್ರಖ್ಯಾತ ಸೀರಿಯಲ್​ ನಟಿಯಾಗಿರುವ ಸ್ವಸ್ತಿಕ್​ ದತ್ತ, ತಾವು ಚಾಲಕನಿಂದ ಎದುರಿಸಿದಂತಹ ಘಟನೆಯನ್ನು ಆತನ ಫೋಟೋ ಸಮೇತ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮನೆಯಿಂದ ದಕ್ಷಿಣ ಕೋಲ್ಕತಾದ ರೇನಿಯಾ ಪ್ರದೇಶದಲ್ಲಿರುವ ಸ್ಟುಡಿಯೋಗೆ ಶೂಟಿಂಗ್​ಗೆಂದು ತೆರಳಲು ಬುಧವಾರ ಬೆಳಗ್ಗೆ ಕ್ಯಾಬ್​ ಬುಕ್​ ಮಾಡಿದ್ದೆ, ನನ್ನನ್ನು ಮನೆಯಿಂದ ಪಿಕ್​ ಅಪ್​ ಮಾಡಿದ ಕ್ಯಾಬ್​ ಚಾಲಕ ಬಳಿಕ ಮಾರ್ಗ ಮಧ್ಯೆ ನನ್ನ ಬುಕ್ಕಿಂಗ್​ ಅನ್ನು ರದ್ದು ಪಡಿಸಿ, ಕಾರಿನಿಂದ ಇಳಿಯುವಂತೆ ಹೇಳಿದ. ಆದರೆ, ನಾನು ತಿರಸ್ಕರಿಸಿದ್ದಕ್ಕೆ ಕೋಪಗೊಂಡ ಚಾಲಕ ತಕ್ಷಣ ಕ್ಯಾಬ್​ ಅನ್ನು ತನ್ನ ಮನೆಯ ಕಡೆಗೆ ತಿರುಗಿಸಿದ. ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ. ಬಳಿಕ ಕ್ಯಾಬ್​ನಿಂದ ಇಳಿದು ಬಂದು ಬಾಗಿಲು ತೆರೆದು ನನ್ನನ್ನು ಹೊರಗೆಳೆದು ಬೀಳಿಸಿದ. ಇದರಿಂದ ನನಗೂ ಭಯವಾಗಿ ಸಹಾಯಕ್ಕಾಗಿ ಕೂಗಿಕೊಂಡೆ. ಸ್ಥಳೀಯರು ಬರುತ್ತಿದ್ದಂತೆ ಆತ ಅಲ್ಲಿಂದ ಪರಾರಿಯಾದ ಎಂದು ಚಾಲಕನ ಹೆಸರು(ಜಮ್ಶೆಟ್​) ಬರೆದು, ಆತನ ಫೋನ್​ ನಂಬರ್​ ಹಾಗೂ ಕ್ಯಾಬ್​ನ ನಂಬರ್​ ಪ್ಲೇಟ್​ ಚಿತ್ರವನ್ನು ಅಪ್​ಲೋಡ್​ ಮಾಡಿ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಸ್ವಸ್ತಿಕ್​ ದತ್​ ಬರೆದುಕೊಂಡಿದ್ದಾರೆ.

ನನಗಾಗಿ ಶೂಟಿಂಗ್​ ವಿಭಾಗ ಕಾಯುತ್ತಿದ್ದರಿಂದ ನಾನು ಅಲ್ಲಿಂದ ತೆರಳಿದೆ. ಶೂಟಿಂಗ್​ ಮುಗಿದ ಬಳಿಕ ಮನೆಗೆ ಬಂದು ನನ್ನ ತಂದೆಗೆ ಘಟನೆಯ ಬಗ್ಗೆ ವಿವರಿಸಿದೆ. ಬಳಿಕ ಕಾನೂನಿನ ಅಡಿಯಲ್ಲಿ ಏನು ಕ್ರಮಕೈಗೊಳ್ಳಬೇಕು ಅದನ್ನು ಮಾಡಿದೆ ಎಂದು ದತ್ತ ಹೇಳಿದ್ದಾರೆ.

ದತ್ತ ಅವರು ನೀಡಿರುವ ದೂರಿಗೆ ಟ್ವೀಟ್​ ಮೂಲಕ ಪ್ರತಿಕ್ರಿಯೆ ನೀಡಿರುವ ಕೋಲ್ಕತಾ ಪೊಲೀಸರು ಖಂಡಿತವಾಗಿ ಕ್ರಮಕೈಗೊಳ್ಳುತ್ತೇವೆ. ಅಪರಾಧಿಯನ್ನು ಯಾವುದೇ ಕಾರಣಕ್ಕೂ ಬಿಡಲಾಗುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಅದರಂತೆಯೇ ಆರೋಪಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

This actually happened to Me, I was humiliated,I was literally thrown out of the car the reason was I had booked uber…

Swastika Dutta ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜುಲೈ 9, 2019

Swastika Dutta ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜುಲೈ 2, 2019

The secret of getting ahead is getting started

Swastika Dutta ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಜೂನ್ 1, 2019

Swastika Dutta ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಮೇ 12, 2019

Swastika Dutta ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಏಪ್ರಿಲ್ 7, 2019