ಔದ್ಯೋಗಿಕ ರಂಗದಲ್ಲಿ ಅಭಿವೃದ್ಧಿ ಸಾಧಿಸಿ

ಕೊಲ್ಹಾರ: ಸಹಕಾರ ತತ್ತ್ವಡಿ ನಡೆಯುವ ಪ್ರತಿಯೊಂದು ಸಂಘಟನೆಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡುತ್ತವೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.

ಪಟ್ಟಣದಲ್ಲಿ ಬಾಗಲಕೋಟೆ ಬಸವೇಶ್ವರ ಸಹಕಾರಿ ಬ್ಯಾಂಕಿನ 27ನೇ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಶತಮಾನೋತ್ಸವ ಪೂರೈಸಿರುವ ಬಸವೇಶ್ವರ ಸಹಕಾರಿ ಬ್ಯಾಂಕ್ ರಾಜ್ಯದ ತುಂಬ ಬಡವರ, ವ್ಯಾಪಾರಸ್ಥರ, ರೈತರ ಆರ್ಥಿಕ ಸುಧಾರಣೆಯತ್ತ ದಾಪುಗಾಲು ಇಟ್ಟಿರುವುದು ಹೆಮ್ಮೆಯ ಸಂಗತಿ ಎಂದರು.

ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶಟ್ಟಿ ಮಾತನಾಡಿ, ಕೊಲ್ಹಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಶ್ರೇಯೋಭಿವೃದ್ಧಿಗಾಗಿ, ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಸ್ಥರ ಅನುಕೂಲಕ್ಕಾಗಿ ವಿವಿಧ ಯೋಜನೆಗಳ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಎಂದರು.

ನಮ್ಮ ಬಸವೇಶ್ವರ ಸಹಕಾರಿ ಬ್ಯಾಂಕಿನಲ್ಲಿ ಎಲ್ಲ ತರಹದ ಸಾಲ ಸೌಲಭ್ಯಗಳ ಜತೆಗೆ ಮುಂಗಡ ಹಣ, ಹಣ ಪಾವತಿದಾರರಿಗೆ ಸರ್ಕಾರಿ ಹಾಗೂ ಖಾಸಗಿ ನೌಕರರಿಗೆ ಸಕಲ ನೆರವು ಪಡೆಯುವ ಅವಕಾಶಗಳು ಇವೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ ಮಾತನಾಡಿ, ಇಂದಿನ ಯುವಕರು ಬಾಗಲಕೋಟ ಸಹಕಾರಿ ಬ್ಯಾಂಕಿನ ಸೌಲಭ್ಯ ಪಡೆದುಕೊಂಡು ವ್ಯಾಪಾರ, ಕೃಷಿ ಕ್ಷೇತ್ರದಲ್ಲಿ ಔದ್ಯೋಗಿಕ ರಂಗದಲ್ಲಿ ಮನ್ನಡೆದು ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಕೊಲ್ಹಾರ ಹಿರೇಮಠದ ಪ್ರಭುಕುಮಾರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಪಪಂ ಅಧ್ಯಕ್ಷ ಕಲ್ಲಪ್ಪ ಸೊನ್ನದ, ಶಂಕ್ರೆಪ್ಪ ದೇಸಾಯಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಈರಪ್ಪ ಗಿಡ್ಡಪ್ಪಗೋಳ, ಸಂಗಪ್ಪ ಹುಚ್ಚಪ್ಪಗೋಳ, ಬಾಳವ್ವ ಗಣಿ, ವೀರಭದ್ರಪ್ಪ ಬಾಗಿ, ಶ್ರೀಶೈಲ ಮಠಪತಿ, ಹಸನಡೊಂಗ್ರಿ ಗಿರಗಾಂವಿ, ಬಂದೇನವಾಜ್ ಗಿರಗಾಂವಿ, ಸ್ಥಳೀಯ ಪ್ರಮುಖರು, ಬಾಗಲಕೋಟ ಬಸವೇಶ್ವರ ಬ್ಯಾಂಕಿನ ನಿರ್ದೇಶಕ ಮಂಡಳಿ, ಸಿಬ್ಬಂದಿ ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.