ಸರ್ಕಾರ ಕಾವೇರಿಯಷ್ಟೆ ಕೃಷ್ಣೆಗೂ ಪ್ರಾಶಸ್ತ್ಯ ನೀಡಲಿ

ಕೊಲ್ಹಾರ: ರೈತರಿಗೆ, ದನಕರುಗಳಿಗೆ ಜಲದೇವತೆ ಕೃಪೆಯಾಗಲಿ ಎಂದು ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ದೇವರಲ್ಲಿ ಪ್ರಾರ್ಥಿಸಿದರು.
ಚಂದ್ರಗ್ರಹಣದ ದೋಷ ನಿವಾರಣೆಗಾಗಿ ತುಂಬಿ ಹರಿಯುತ್ತಿರುವ ಕೃಷ್ಣೆಗೆ ಬುಧವಾರ ಹಿರೇಮಠದ ಮುರುಘೇಂದ್ರ ಶ್ರೀಗಳು ಹಮ್ಮಿಕೊಂಡಿದ್ದ ನದಿ ಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ ಹಾಗೂ ರಾಯಚೂರು ಜಿಲ್ಲೆಗಳ ಜೀವನಾಡಿಯಾದ ಕೃಷ್ಣಾ ನದಿಯು ಈ ಭಾಗದಲ್ಲಿ ಹರಿಯುತ್ತಿರುವುದು ರೈತರಿಗೆ ವರದಾನವಾಗಿದೆ. ಸರ್ಕಾರ ಕಾವೇರಿ ನದಿಗೆ ಕೊಡುವ ಪ್ರಾಶಸ್ತ್ಯವನ್ನು ಉತ್ತರ ಕರ್ನಾಟಕದ ಪ್ರಮುಖ ನದಿಯಾದ ಕೃಷ್ಣೆಗೂ ಕೊಡಬೇಕು ಎಂದು ಹೇಳಿದರು.
ಈಗ ಕೃಷ್ಣಾ ನದಿಯ ಒಳಹರಿವು ಅಧಿಕವಾಗಿದ್ದು, ಈಗ ಕಾಲುವೆಗಳಿಗೆ ಹಾಗೂ ಕೆರೆಗಳನ್ನು ತುಂಬಲು ಯೋಜನೆ ಹಾಕಿಕೊಳ್ಳಬೇಕು. ಒಳಹರಿವು ಕಡಿಮೆಯಾದಾಗ ನೀರು ಹರಿಬಿಡುವುದರಿಂದ ವ್ಯರ್ಥವಾಗುತ್ತದೆ. ಆದ್ದರಿಂದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಕ್ಷಣ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಬಿಡಲು ಕ್ರಮಕೈಗೊಳ್ಳಬೇಕು ಎಂದರು.
ಮುರುೇಂದ್ರ ಶ್ರೀಗಳು ಹಾಗೂ ಅವರ ಪತ್ನಿ ಸುನೀತಾ, ಪಟ್ಟಣದ ಪ್ರಮುಖರಾದ ಗುರಪ್ಪ ಗಣಿ, ಸಂಗಪ್ಪ ಚೌದರಿ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಈರಣಗೌಡ ಕೋಮಾರ, ಕಂಠೆಪ್ಪ ಕುಂಬಾರ, ವೀರಭದ್ರಪ್ಪ ಬಾಗಿ, ಡೊಂಗ್ರಿ ಕಟಬರ, ದುಂಡಪ್ಪ ಕೋಠಾರಿ, ದಾದಾಪೀರ್ ಬಿಜಾಪುರ ಮತ್ತಿತರರು ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published. Required fields are marked *