ಕಾರು-ಬುಲೆರೋ ಡಿಕ್ಕಿಗೆ ಓರ್ವ ಸಾವು

ಗೊಳಸಂಗಿ: ಕೊರ್ತಿ-ಕೊಲ್ಹಾರ ಯುಕೆಪಿ ಸೇತುವೆ ಬಳಿ ಬುಧವಾರ ತಡರಾತ್ರಿ ಕಾರು-ಬುಲೆರೋ ವಾಹನಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಗೊಳಸಂಗಿ ಗ್ರಾಮದ ಯಮನಪ್ಪ ಆದಪ್ಪ ಹೊಸಮನಿ (30) ಮೃತ ದುರ್ದೈವಿ. ಭೀಕರ ಅಪಘಾತಕ್ಕೆ ಯಮನಪ್ಪ ಅವರ ಬಲಗೈ ಕೂಡ ತುಂಡರಿಸಿದೆ. ಜತೆಗೆ ಬುಲೆರೋ ವಾಹನ ಚಾಲಕ ಮತ್ತು ಕಾರು ಹಿಂಬದಿ ಸವಾರನಿಗೂ ಗಾಯಗಳಾಗಿವೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *