ಕೋಲಾರ: ಕೋಲಾರದ ತಹಸೀಲ್ದಾರ್ ಶೋಭಿತಾ ಅವರ ಕಾರ್ಯವೈಖರಿಗೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. .
ಕರೊನಾ ಲಾಕ್ಡೌನ್ ಉಲ್ಲಂಘಿಸಿ ಕೋಲಾರದಲ್ಲಿ ಗುರುವಾರ ಮಸೀದಿಯೊಳಗೆ ಗುಂಪಾಗಿ ನಮಾಜ್ ಮಾಡುತ್ತಿದ್ದರು. ಈ ವೇಳೆ ತಹಶೀಲ್ದಾರ್ ಶೋಭಿತಾ ಅವರು ಮಸೀದಿ ಒಳಗೆ ನುಗ್ಗಿ ನಮಾಜ್ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಕಷ್ಟು ಬಾರಿ ಸರ್ಕಾರ ಸೂಚನೆ ನೀಡಿದ್ದರು ಹಾಗೂ ಖುದ್ದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮನವಿ ಮಾಡಿದ್ದರೂ ಅದನ್ನು ಧಿಕ್ಕರಿಸಿ ನಮಾಜ್ ಮಾಡುತ್ತಿದ್ದವರಿಗೆ ಶೋಭಿತಾ ಅವರು ತಿಳಿಹೇಳಿದರು.
ಇದನ್ನೂ ಓದಿ: ಸುಳ್ಳು ಹೇಳಿ ಬಾಯ್ಫ್ರೆಂಡ್ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?
ಈ ವೇಳೆ 11 ಮಂದಿಯನ್ನು ವಶಕ್ಕೆ ಪಡೆದು ಖಡಕ್ ಎಚ್ಚರಿಕೆ ಕೊಟ್ಟು ಬಿಡುಗಡೆ ಸಹ ಮಾಡಿದರು. ಶೋಭಿತಾ ಅವರ ಕಾರ್ಯವೈಖರಿ ಸಾಬೀತುಪಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಮೆಚ್ಚುಗೆ ಮಹಾಪೂರ ಹರಿದುಬರುತ್ತಿದೆ. ಮಸೀದಿ ಒಳಗೆ ನುಗ್ಗಿದ ಪ್ರಪ್ರಥಮ ಲೇಡಿ ಸಿಗಂ ಎಂದು ಜನರಿಂದ ಬಹುಪರಾಕ್ ಕೇಳಿಬಂದಿದೆ.
ಮುಂಬೈನಿಂದ ಮಂಡ್ಯಕ್ಕೆ ತಂದು ಶವ ಸಂಸ್ಕಾರ: ಮೇಲುಕೋಟೆ ಸುತ್ತಮುತ್ತ ಹೆಚ್ಚಿದ ಆತಂಕ