More

    ಬಿತ್ತನೆಯತ್ತ ಮುಖ ಮಾಡಿದ ರೈತ

    ಶ್ರೀನಿವಾಸಪುರ: ವಾವಿನ ಸುಗ್ಗಿ ಮುಗಿಯುತ್ತಿದ್ದಂತೆ ಮುಂಗಾರು ಮಳೆ ಪ್ರಾರಂಭಗೊಂಡಿದ್ದರಿಂದ ಬಹುತೇಕ ರೈತರು ಬಿತ್ತನೆಯತ್ತ ಮುಖ ಮಾಡಿದ್ದು, ಭೂಮಿ ಹದ ವಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.

    ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆದಿದ್ದು ಶೇಂಗಾ ಬಿತ್ತನೆಗೆ ಕಾಲಾವಕಾಶ ಮುಗಿದು ರಾಗಿ ಸೇರಿ ತೊಗರಿ, ಅಲಸಂದೆ ಮುಂತಾದ ಬೀಜಗಳಿಗೆ ಕಾಲಾವಕಾಶ ಇರುವುದರಿಂದ ರೈತರು ಭೂಮಿ ಉಳುಮೆ ಮಾಡಿ ಬಿತ್ತನೆ ಮಾಡಲು ಮುಂದಾಗಿದ್ದಾರೆ.

    ತಾಲೂಕಿನಲ್ಲಿ ಇತ್ತೀಚೆಗೆ ಮಳೆಯಾಗುತ್ತಿದ್ದು, ರಾಯಲ್ಪಾಡು ಮತ್ತು ನೆಲವಂಕಿ ಹೋಬಳಿಗಳಲ್ಲಿ ವಾತ್ರ ಶೇಂಗಾ ಬಿತ್ತನೆ ವಾಡುವುದು ವಾಡಿಕೆ. ಈಗಾಗಲೆ ಈ ಹೋಬಳಿಗಳಲ್ಲಿ ಶೇಂಗಾ ಬಿತ್ತನೆ ಕಾರ್ಯ ಮುಗಿದಿದೆ. ರೋಣೂರು, ಯಲ್ದೂರು ಮತ್ತು ಕಸಬಾ ಹೋಬಳಿಗಳಲ್ಲಿ ರಾಗಿ, ಅಲಸಂದೆ, ತೊಗರಿ, ಅವರೆ ಬೀಜ ಹೆಚ್ಚಾಗಿ ಬಿತ್ತನೆ ವಾಡುತ್ತಾರೆ. ಈ ಹೋಬಳಿಗಳಲ್ಲಿ ವಾವಿನ ತೋಟ ಹೆಚ್ಚಾಗಿದ್ದು, ಈಗ ತಾನೆ ವಾವಿನ ಸುಗ್ಗಿ ಮುಗಿದಿದ್ದರಿಂದ ರಾಗಿ, ತೊಗರಿ, ಅವರೆ ಬಿತ್ತನೆಗೆ ಮುಂದಾಗಿದ್ದಾರೆ.

    ಶ್ರೀನಿವಾಸಪುರದಲ್ಲಿ ಅವರೆ ಸುಗ್ಗಿ: ವಾವಿನ ತೋಟ, ಕೆರೆಯಂಗಳದ ಭೂಮಿ ಮತ್ತು ಖಾನೆ (ಮನೆ ಮುಂದಿನ) ಅಂಗಳದ ಭೂಮಿಗಳಲ್ಲಿ ಅವರೆ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಅವರೆ ಸುಗ್ಗಿಯಲ್ಲಿ ಶ್ರೀನಿವಾಸಪುರ ಮುಂಚೂಣಿಯಲ್ಲಿದ್ದು, ಅವರೆಕಾಯಿ ವ್ಯಾಪಾರ ವ್ಯಾಪಕವಾಗಿ ನಡೆಯುತ್ತಿದೆ.

    ತಾಲೂಕಿನಲ್ಲಿ 388 ಮಿಮೀ ಮಳೆ: ಜೂನ್ ಅಂತ್ಯಕ್ಕೆ ತಾಲೂಕಿನಲ್ಲಿ 388 ಮಿಮೀ ಮಳೆಯಾಗಿದೆ. 183 ಹೆಕ್ಟೇರ್ ಭೂಮಿಯಲ್ಲಿ ರಾಗಿ ಮತ್ತು 93 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ, 126 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ 14 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದೆ ಬಿತ್ತನೆಯಾಗಿದೆ. ಪ್ರಮುಖ ಬೆಳೆ ರಾಗಿ ಶೇ.10 ಮತ್ತು ನೆಲಗಡಲೆ ಶೇ.30 ಬಿತ್ತನೆಯಾಗಿದೆ. ರಾಗಿ 7764 ಹೆಕ್ಟೇರ್ ಪ್ರದೇಶದಲ್ಲಿ, ಶೇಂಗಾ 3102 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿದೆ.

     

    ರಾಗಿ ಬಿತ್ತನೆಗೆ ಇನ್ನೂ ಕಾಲಾವಕಾಶ ಇರುವುದರಿಂದ ನೆಲಗಡಲೆ ಹೊರತುಪಡಿಸಿ ಉಳಿದ ಬಿತ್ತನೆ ಬೀಜಗಳು ಇಲಾಖೆಯಲ್ಲಿ ಲಭ್ಯವಿವೆ. ರೈತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಬಿತ್ತನೆ ಬೀಜ ಪಡೆಯಬಹುದು.
    ಈಶ್ವರ್, ತಾಂತ್ರಿಕ ಅಧಿಕಾರಿ ಕೃಷಿ ಇಲಾಖೆ, ಶ್ರೀನಿವಾಸಪುರ

    ಈ ವರ್ಷ ಉತ್ತಮ ಮಳೆಯಾಗುತ್ತಿದೆ. ಜೂನ್ ಅಂತ್ಯದಲ್ಲಿ ಬಿದ್ದ ಮಳೆಗೆ ಶೇ.30 ಶೇಂಗಾ ಬೀಜ ನಾಟಿ ಮಾಡಲು ಸಾಧ್ಯವಾಯಿತು. ಉಳಿದ ಭಾಗಕ್ಕೆ ರಾಗಿ ಮತ್ತು ತೊಗರಿ ಬಿತ್ತಲು ಕಾಲಾವಕಾಶವಿದೆ.
    ಚಿನ್ನಪರೆಡ್ಡಿ, ಚಿಲ್ಲಾರಪಲ್ಲಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts