ಯಮಸ್ವರೂಪಿಯಾದ ಕೋಲಾರ-ಶ್ರೀನಿವಾಸಪುರ ರಸ್ತೆ

blank

ಕೋಲಾರ: ಕೋಲಾರ-ಶ್ರೀನಿವಾಸಪುರ ಮುಖ್ಯ ರಸ್ತೆಯಲ್ಲಿ ಗುಂಡಿಳದ್ದೇ ದರ್ಬಾರ್ ಹೆಚ್ಚಾಗಿದ್ದು, ವಾಹನ ಸವಾರರನ್ನು ಅಪಾಯಕ್ಕೆ ಆಹ್ವಾನಿಸುತ್ತಿವೆ.

ಶ್ರೀನಿವಾಸಪುರ ತಾಲೂಕು ಕೇಂದ್ರದಿಂದ ಜಿಲ್ಲಾಕೇಂದ್ರ ಕೋಲಾರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಅಭಿವೃದ್ಧಿ ಕಾಣದೆ ಹಳೇ ಕಾಲದ ರಸ್ತೆಯಂತೇ ಇದೆ. ರಸ್ತೆಯಲ್ಲಿ ಪ್ರತಿ ದಿನ ಸಾವಿರಾರು ವಾಹನಗಳ ಸಂಚಾರ ಇದ್ದರೂ ಸಹ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿಲ್ಲ.
ಶ್ರೀನಿವಾಸಪುರ ತಾಲೂಕು ಕೇಂದ್ರದ ಜತೆಗೆ ಹಲವು ಗ್ರಾಮಗಳಿಗೂ ಹಾಗೂ ಆಂಧ್ರಪ್ರದೇಶದ ಮದನಪಲ್ಲಿ, ಪುಂಗನೂರಿಗೂ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಕೋಲಾರದಿಂದ ಶ್ರೀನಿವಾಸಪುರಕ್ಕೆ 24 ಕಿ.ಮಿ. ಪ್ರಯಾಣ ಮಾಡುವುದು ತಲೆನೋವಾಗಿ ಪರಿಣಮಿಸಿದೆ.
ಜಿಲ್ಲಾ ಕೇಂದ್ರದಿಂದ ಮುಳಬಾಗಿಲು, ಬಂಗಾರಪೇಟೆ, ಕೆಜಿಎಫ್ ತಾಲೂಕುಗಳಿಗೆ ಸಂಪರ್ಕ ಕಲ್ಪಿಸಲು ಸೂಕ್ತ ರಸ್ತೆಗಳು ಇವೆ. ಆದರೆ ಮಾಲೂರು, ಶ್ರೀನಿವಾಸಪುರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಹಳ ಕಿರಿದಾಗಿವೆ.
ನಗರದಿಂದ ಶ್ರೀನಿವಾಸಪುರಕ್ಕೆ ಹೋಗುವ ಬಾರಂಡಹಳ್ಳಿ, ಮಲ್ಲಸಂದ್ರ, ಕೋಡಿಕಣ್ಣೂರು, ಮುದುವಾಡಿ ಸಮೀಪದ ರಸ್ತೆಯಲ್ಲಿ ಮೊಣಕಾಲುದ್ದ ಗುಂಡಿಗಳು ನಿರ್ಮಾಣಗೊಂಡಿವೆ. ಮಳೆ ಬಂದರೆ ಗುಂಡಿಯಲ್ಲಿ ನೀರು ತುಂಬಿಕೊಂಡು ರಸ್ತೆಯೇ ಕಾಣುವುದಿಲ್ಲ. ಇದರಿಂದಾಗಿ ವಾಹನ ಸವಾರರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ.
ಈ ಮಾರ್ಗದಲ್ಲಿ ತರಕಾರಿ, ಬಸ್, ಲಾರಿ, ಟೆಂಪೋ, ಆಟೋ, ಶಾಲಾ-ಕಾಲೇಜು ವಾಹನಗಳು, ಕೈಗಾರಿಕೆಗಳ ವಾಹನಗಳು ಹಾಗೂ ಆಂಧ್ರದಿಂದ ಸಾವಿರಾರು ವಾಹನಗಳು ಜಿಲ್ಲಾ ಕೇಂದ್ರಕ್ಕೆ ಹಾಗೂ, ಈ ಮಾರ್ಗವಾಗಿ ಬೆಂಗಳೂರಿಗೆ ಹಾದು ಹೋಗುತ್ತವೆ. ಮುಖ್ಯಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿರುವುದರಿಂದ ಓಡಾಡಲು ಯೋಗ್ಯವಿಲ್ಲದಂತಾಗಿದೆ. ಮುದುವಾಡಿ ಕೆರೆಯ ಸಮೀಪ ಕೋಡಿಯಲ್ಲಿ ರಸ್ತೆ ಹಾನಿಯಾಗಿದೆ, ಮಲ್ಲಸಂದ್ರ ಸಮೀಪ ಮೇಲ್ಸೆತುವೆ ಮೇಲೂ ರಸ್ತೆಯ ಮಧ್ಯೆ ಭಾಗದಲ್ಲಿ ಗುಂಡಿಗಳು ಬಿದ್ದಿವೆ. ಅಲ್ಲದೆ ರಸ್ತೆಯು ಬಹಳ ಕಿರಿದಾಗಿದ್ದು ವಾಹನಗಳ ಸುಗಮ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ.
ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿರುವುದರಿಂದ ಆಯಾ ಕಾಲಕ್ಕೆ ಹಾಗೂ ವಾಹನಳ ಸಂಚಾರಕ್ಕೆ ತಕ್ಕಂತೆ ಅಭಿವೃದ್ಧಿಯಾಗಿಲ್ಲ. ಹಾನಿಯಾಗಿರುವ ಕಡೆ ರಿಪೇರಿ ಹೆಸರಿನಲ್ಲಿ ತೇಪೆ ಹಾಕುವುದು ಬಿಟ್ಟರೆ ಸಮಗ್ರ ಅಭಿವೃದ್ಧಿಡಿಸಲು ಲೋಕೋಪಯೋಗಿ ಇಲಾಖಾಧಿಕಾರಿಗಳಲ್ಲಿ ಬದ್ಧತೆ ಹಾಗೂ ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಕೊರತೆಯಿರುವುದರಿಂದ ರಸ್ತೆ ಮೇಲ್ದರ್ಜೇರಿಸಲು ಸಾಧ್ಯವಾಗಿಲ್ಲ. ಇನ್ನಾದರು ಎಚ್ಚೆತ್ತುಕೊಂಡು ಅಭಿವೃದ್ಧಿಪಡಿಸಲು ಕ್ರಮವಹಿಸಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
ಪ್ರತಿದಿನ ಟೊಮ್ಯಾಟೊ, ತರಕಾರಿ ಹಾಕಿಕೊಂಡು ರಾತ್ರಿ ವಾಹನಗಳು ಹೆಚ್ಚು ಸಂಚಾರ ಮಾಡುತ್ತವೆ. ರಸ್ತೆಯು ಅಲ್ಲಲ್ಲಿ ಹಾನಿಯಾಗಿರುವುದರಿಂದ ಸಕಾಲಕ್ಕೆ ಮಾರುಕಟ್ಟೆಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ವಾಹನ ಚಾಲಕ ಟಿ.ಎ.ಅಂಬರೀಶ್ ತಿಳಿಸಿದ್ದಾರೆ.

ಮೇಲ್ದರ್ಜೆಗೇರಿಸಲು ಒತ್ತಾಯ
ವಾಹನಗಳ ಸಂಚಾರ ದಿನೇದಿನೆ ಹೆಚ್ಚಾಗುತ್ತಿದ್ದು, ರಸ್ತೆಯು ಈಗಿನ ಕಾಲಕ್ಕೆ ತಕ್ಕಂತೆ ಅಭಿವೃದ್ಧಿಗೊಂಡಿಲ್ಲ. ಕೋಲಾರ-ಶ್ರೀನಿವಾಸಪುರ ರಸ್ತೆಯಲ್ಲಿ ಅಭಿವೃದ್ಧಿ ಕೆಲಸಗಳಿಗಿಂತ ತೆಪ್ಪೆ ಹಾಕುವ ಕೆಲಸಗಳೇ ಜಾಸ್ತಿ ನಡೆಯುತ್ತಿವೆ. ಇದರಿಂದಾಗಿ ರಸ್ತೆ ಹಾನಿಯಾಗುವ ಸಮಸ್ಯೆಯನ್ನು ನಿವಾರಣೆ ಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಸವಾರರು ಆಗ್ರಹಿಸಿದ್ದಾರೆ.

Share This Article

ತಣ್ಣೀರಿಗೆ ಬಿಸಿ ನೀರು ಬೆರೆಸಿ ಕುಡಿದ್ರೆ ಏನಾಗುತ್ತೆ? ಈ ವಿಚಾರ ನಿಮ್ಗೆ ತಿಳಿದಿರಲೇಬೇಕು ಇಲ್ಲದಿದ್ರೆ ಅಪಾಯ ಫಿಕ್ಸ್! Water

Water : ತಣ್ಣೀರಿಗೆ ಬಿಸಿ ನೀರು ಬೆರೆಸಿ ಕುಡಿಯುವ ಅಭ್ಯಾಸ ನಿಮಗಿದೆಯೇ? ಹಾಗಾದರೆ ನೀವು ಈ…

Banana Peel : ನೀವೂ ಬಾಳೆಹಣ್ಣು ತಿಂದ ನಂತರ ಸಿಪ್ಪೆ ಎಸೆಯುತ್ತೀರಾ? ಇದನ್ನು ಈ ರೀತಿ ಬಳಸಿ ಬಿಡಿ..

 ಬೆಂಗಳೂರು: ( Banana Peel ) ಸೊಳ್ಳೆಗಳು ರಾತ್ರಿ ನಿದ್ರೆಗೆ ಭಂಗ ತರುವುದಲ್ಲದೆ ನಾನಾ ರೋಗಗಳಿಗೆ…

ಒಬ್ಬ ವ್ಯಕ್ತಿ ಸತ್ತ ನಂತರ ಏನಾಗುತ್ತದೆ? ನರ್ಸ್​ ಹೇಳಿದ ಭಯಾನಕ ಸಂಗತಿ ವೈರಲ್​ | Death

Death : ಒಬ್ಬ ವ್ಯಕ್ತಿ ಸತ್ತ ನಂತರ ದೇಹದಲ್ಲಿ ಏನಾಗುತ್ತದೆ ಎಂಬ ಮಾಹಿತಿಯನ್ನು ಅಮೆರಿಕ ಮೂಲದ…