ಕೋಲಾರದಲ್ಲಿ ಮದ್ವೆ ಆಮಂತ್ರಣ ಪತ್ರಿಕೆ ಕೊಡುವ ನೆಪದಲ್ಲಿ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸ್ಫೊಟಕ ತಿರುವು: ದೂರು ಕೊಟ್ಟಾಕೆಯೇ ಕಳ್ಳಿ!

ಬೇತಮಂಗಲ: ಮದುವೆ ಆಮಂತ್ರಣ ಕೊಡುವ ನೆಪದಲ್ಲಿ ಬಂದಿದ್ದ ಮಹಿಳೆಯರಿಬ್ಬರು ಮನೆಯವರನ್ನು ಪ್ರಜ್ಞೆ ತಪ್ಪಿಸಿ 200 ಗ್ರಾಂ ಆಭರಣ ದೋಚಿದ್ದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಆಭರಣ ಕಳವಾಗಿದೆ ಎಂದು ದೂರು ನೀಡಿದ್ದ ಮಹಿಳೆಯನ್ನೇ ಇದೀಗ ಬೇತಮಂಗಲ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ!

ಆಮಂತ್ರಣ ಪತ್ರಿಕೆ ಕೊಡುವ ನೆಪದಲ್ಲಿ ಮನೆ ಬಳಿ ಬಂದ ಮಹಿಳೆಯರಿಬ್ಬರು ಆಭರಣ ದೋಚಿ ಪರಾರಿಯಾಗಿದ್ದಾ ಎಂದು ಕಳೆದ ವಾರ ಬೇತಮಂಗಲ ಪೊಲೀಸ್​ ಠಾಣೆಯಲ್ಲಿ ಪಟ್ಟಣದ 2ನೇ ಬ್ಲಾಕ್​ ನಿವಾಸಿ ನೂರ್​ ಅಮೀನ್ ದೂರು ದಾಖಲಿಸಿದ್ದರು. ಠಾಣೆ ಸಮೀಪವೇ ಇಂತಹ ಕೃತ್ಯ ನಡೆದಿರುವುದು ಮತ್ತಷ್ಟು ಆತಂಕ ಹೆಚ್ಚಿಸಿತ್ತು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಧರಣಿದೇವಿ ಮಾಲಗತ್ತಿ ಸೇರಿದಂತೆ ಹಿರಿಯ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಶ್ವಾನದಳ ಸೇರಿದಂತೆ ಇತರ ವಿಶೇಷ ಪೊಲೀಸ್​ ತಂಡಗಳು ಪರಿಶೀಲಿಸಿದ್ದವು. ತನಿಖೆ ಕೈಗೊಂಡಿದ್ದ ಬೇತಮಂಗಲ ಪಿಎಸ್​ಐ ಜಗದೀಶ್​ ರೆಡ್ಡಿ ಮತ್ತು ತಂಡವು ಸೂಕ್ಷ್ಮವಾಗಿ ತನಿಖೆ ನಡೆಸಿದಾಗ ದೂರುದಾರ ಮಹಿಳೆ ಮೇಲೆಯೇ ಅನುಮಾನ ಬಂದಿದೆ. ಆಗ ಮಹಿಳೆಯನ್ನು ವಿಚಾರಣೆ ನಡೆಸಿದಾಗ ತಾನೇ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಅಕ್ರಮ ಸಂಬಂಧ: ಬಂಧಿತೆ ನೂರ್​ ಅಮೀನ್​ ಅಕ್ಕ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ಈ ಗುಟ್ಟನ್ನು ರಟ್ಟಾಗದಂತೆ ನೋಡಿಕೊಳ್ಳಲು ಆಕೆಯಿಂದ ಆಭರಣ ಪಡೆದಿದ್ದಳು. ಆಭರಣಗಳು ಕಳೆದುಹೋಗಿವೆ ಎಂದು ಮನೆಯವರನ್ನು ನಂಬಿಸಲು ಠಾಣೆಯಲ್ಲಿ ದೂರು ನೀಡಿದ್ದಳು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಪೊಲೀಸರನ್ನೇ ಆಟ ಆಡಿಸಿದ ಖತರ್ನಾಕ್​ ಮಹಿಳೆಯ ವಿರುದ್ಧ ದೂರು ದಾಖಲಿಸಿ ಶುಕ್ರವಾರ ಜೈಲಿಗೆ ಕಳುಹಿಸಲಾಗಿದೆ.

ಬೇತಮಂಗಲ ಪಿಎಸ್​ಐ ಜಗದೀಶರೆಡ್ಡಿ, ಶ್ರೀನಿವಾಸ್​, ಸಿಬ್ಬಂದಿ ಶಿವಪ್ರಸಾದ್​, ನಟರಾಜ್​, ಸಂಪಂಗಿ, ರಾಜ್​ಕುಮಾರ್​, ರೇಣುಕಾ ಕಿರಣ್ಣನವರ್​, ಮುರಳಿ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿದೆ.

ಕುಣಿಗಲ್​ ಸ್ಟಡ್​ ಫಾರಂನಲ್ಲಿ ದುರಂತ: ಹೆಜ್ಜೇನು ದಾಳಿಗೆ ಕೋಟ್ಯಂತರ ಬೆಲೆಬಾಳುವ ವಿದೇಶಿ ತಳಿಯ 2 ಕುದುರೆಗಳ ಸಾವು

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಂದು ಹಾವೇರಿಗೆ ಆಗಮಿಸಿದ್ದ ಮಂಡ್ಯ ಮೂಲದ ಶಿಕ್ಷಕ ಸಾವು

Share This Article

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…

ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಈ ಮೂರು ಕೆಲಸಗಳನ್ನು ಮಾಡಿದ ನಂತರ ಹಲ್ಲುಜ್ಜಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ..

ಬೆಂಗಳೂರು: ಬಾಯಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು…