Friday, 16th November 2018  

Vijayavani

Breaking News

ಬಾವಿಯಲ್ಲಿ ನಾಲ್ವರು ಅಪರಿಚಿತರ ಶವ ಪತ್ತೆ

Thursday, 12.07.2018, 2:04 PM       No Comments

ಕೋಲಾರ: ಬಾವಿಯೊಂದರಲ್ಲಿ ಅನುಮಾನಾಸ್ಪದವಾಗಿ ನಾಲ್ಕು ಅಪರಿಚಿತರ ಶವ‌ ಪತ್ತೆಯಾಗಿದೆ.

ಜಿಲ್ಲೆಯ ಮುಳಬಾಗಲು ತಾಲೂಕಿನ ಬೆಟ್ಟಗೇರಹಳ್ಳಿಯ ನಾರಾಯಣಸ್ವಾಮಿ ಎಂಬುವರ ಬಾವಿಯಲ್ಲಿ ಶವಗಳು ಪತ್ತೆಯಾಗಿದ್ದು, ಎರಡು ದಿನಗಳ‌ ಹಿಂದೆ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಮೃತರ ಹೆಸರುಗಳು ಹಾಗೂ ಗುರುತು ಇನ್ನೂ ತಿಳಿದು ಬಂದಿಲ್ಲ,

ಬಾವಿಯಲ್ಲಿ ಶವಗಳ ಪತ್ತೆಯಾದ ತಕ್ಷಣ ಮಾಲೀಕ ನಾರಾಯಣಸ್ವಾಮಿ ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರು ಮಹಿಳೆಯರು ಮತ್ತು ಇಬ್ಬರ ಮಕ್ಕಳ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯೋ ಅಥವಾ ಯಾರಾದರೂ ಕೊಲೆ ಮಾಡಿದ್ದಾರೆಯೇ ಎಂಬುದರ ಮಾಹಿತಿ ತನಿಖೆ ನಡೆದ ನಂತರ ತಿಳಿಯಲಿದೆ.

ಮಳಬಾಗಲು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top